ರಾಹುಕಾಲ ನಂತರ ಬಿಎಸ್ ವೈ ಹೊರಕ್ಕೆ: ಸ್ವಾಮಿ
ಬೆಂಗಳೂರು,
ನ.8: ಸನ್ಮಾನ್ಯ ಯಡಿಯೂರಪ್ಪ ಅವರು ಕೋರ್ಟ್ ಆದೇಶ ಕೇಳಿದ ನಂತರ ತುಂಬಾ ಸಂತಸದಿಂದಿದ್ದಾರೆ. ಕೋರ್ಟ್ ಆದೇಶದಂತೆ ಷ್ಯೂರಿಟಿ ನೀಡಲಾಗಿದ್ದು, ಬಿಡುಗಡೆ ಆದೇಶ ಪತ್ರವನ್ನು ಬಿಎಸ್ ವೈ ಅವರ ಪುತ್ರ ವಿಜಯೇಂದ್ರ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ನೀಡಬೇಕಿದೆ ಎಂದು ಯಡಿಯೂರಪ್ಪ ಅವರ ಆಪ್ತ ಸಿದ್ದಲಿಂಗಸ್ವಾಮಿ ಹೇಳಿದ್ದಾರೆ. id="toptextpromo">ಯಡಿಯೂರಪ್ಪ
ಅವರ ಬಿಡುಗಡೆ ಪತ್ರ ಅಧಿಕಾರಿಗಳಿಗೆ ನೀಡಿ ಅನುಮತಿ ಪಡೆದು ರಾಹುಕಾಲದ ನಂತರ ಸುಮಾರು 4.35 ನಿಮಿಷಕ್ಕೆ ಯಡಿಯೂರಪ್ಪ ಅವರು ಬಲಗಾಲಿಟ್ಟು ಜೈಲಿನಿಂದ ಹೊರಕ್ಕೆ ಬಂದರೆ ಒಳ್ಳೆಯದು ಎಂದು ಜ್ಯೋತಿಷಿಗಳು ಸೂಚಿಸಿದ್ದಾರೆ. ಅದರಂತೆ ಪಾಲಿಸಲಾಗುವುದು ಎಂದು ಸ್ವಾಮಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಬಿಡುಗಡೆ
ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ ಹಾಗೂ ಸಂಸದ ಜಿಎಸ್ ಬಸವರಾಜ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದ್ದು, ಅಗ್ರಹಾರದ ಜೈಲಿನ ಸುತ್ತಮುತ್ತ ಮತ್ತೆ ಪೊಲೀಸ್ ಕಾವಲು ನಿಯೋಜಿಸಲಾಗಿದೆ.











Click it and Unblock the Notifications