ಅಗ್ರಹಾರದಲ್ಲಿ ರೇಣುಕಾ ಡಾನ್ಸ್ ರಾಜಾ ಡಾನ್ಸ್

Minister Renukacharya
ಬೆಂಗಳೂರು, ನ.8: 'ನಾಡಿನ ಉದ್ದಗಲಕ್ಕೂ ಜನತೆ ಸಂತಸ ಸಂಭ್ರಮವನ್ನು ಆಚರಿಸಲಿದ್ದೇವೆ. ಬಳ್ಳಾರಿ ಚುನಾವಣೆ ಬಗ್ಗೆ ನಾಯಕರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದರಂತೆ ನಾವು ನಡೆಯುತ್ತೇವೆ. ಯಡಿಯೂರಪ್ಪ ಅವರು ಹೇಳಿದರೆ ಬಳ್ಳಾರಿ ಚುನಾವಣೆಯಲ್ಲಿ ಪ್ರಚಾರ ಇಲ್ಲದಿದ್ದರೆ ಇಲ್ಲ' ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಹೇಳಿದರು.

ಇದು ಜನತೆಗೆ ಬಿಎಸ್‌ವೈ ನೀಡಿದ ಸೇವೆಗೆ ಸಿಕ್ಕ ಪ್ರತಿಫಲ ಸಿಕ್ಕಿದೆ.ಯಡಿಯೂರಪ್ಪನವರ ತೇಜೋವಧೆ ಮಾಡಿದವರಿಗೆ ತಕ್ಕಪಾಠ ಕಲಿಸಬೇಕಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬಯಲಿಗೆಳೆಯಬೇಕಿದೆ ಎಂದು ರೇಣಕಾಚಾರ್ಯ ಅವರು ಪರಪ್ಪನ ಅಗ್ರಹಾರ ಜೈಲಿನ ಬಳಿ ಸಂಭ್ರಮದಲ್ಲಿ ತೇಲುತ್ತಾ ನುಡಿದರು. ರೇಣುಕಾಚಾರ್ಯ ಅವರು ಸಂಭ್ರಮದಿಂದ ಕುಣಿಯುವುದನ್ನು ಕಾಣಲು ಅಭಿಮಾನಿಗಳು ಕಾತುರದಿಂದ ಕಾದಿದ್ದರು.

ನಿರಾಣಿ ನಿರಾಳ: ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೇಲಕ್ಕೆತ್ತಿ ಸರ್ಕಾರ ಕಟ್ಟಿ ಬೆಳೆಸಿದ ನಮ್ಮ ನಾಯಕ ಯಡಿಯೂರಪ್ಪ ಅವರನ್ನು ವಿಪಕ್ಷಗಳು ನಡೆಸಿಕೊಂಡಿರುವ ರೀತಿ ಬೇಸರ ತರಿಸಿದೆ. ನಮ್ಮ ನಾಯಕರು ಹೊರ ಬರುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ದಿನವಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯೇಕ ಮಾರ್ಗ: ಯಡಿಯೂರಪ್ಪ ಅವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ವಕೀಲ ಸಂದೀಪ್ ಪಾಟೀಲ್ ಅವರು ಕೋರ್ಟ್ ಆದೇಶ ಪ್ರತಿ ಹಿಡಿದುಕೊಂಡು ಜೈಲಿನತ್ತ ಹೊರಟಿದ್ದಾರೆ. ಪರಪ್ಪನ ಅಗ್ರಹಾರದಿಂದ ರೇಸ್ ಕೋರ್ಸ್ ನ ಯಡಿಯೂರಪ್ಪ ನಿವಾಸದ ತನಕ ಪ್ರತ್ಯೇಕ ಮಾರ್ಗ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಹಾಗಾಗಿ ಬಿಡುಗಡೆ ಕೊಂಚ ಕಾಲ ವಿಳಂಬವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+