ಬೆಂಗಳೂರಿನಲ್ಲಿ ಸಿಬಿಐ ಎಫ್‌ಐಆರ್: ರೆಡ್ಡಿ ಪತ್ನಿ ಅರುಣಾ ಬಂಧನ?

cbi-fir-in-bangalore-lakshmi-aruna-reddy-to-be-arrested
ಬೆಂಗಳೂರು, ಸೆ.6: ಅತ್ತ, ಚಂಚಲಗೂಡ ಜೈಲಿನಲ್ಲಿ ವಿಶ್ರಮಿಸಿಕೊಳ್ಳುತ್ತಿರುವ ಗಣಿವೀರ ಜನಾರ್ದನ ರೆಡ್ಡಿ (ಕೈದಿ ನಂ. 697) ವಿರುದ್ಧ ಖಡಕ್ಕಾದ ಆರೋಪಪಟ್ಟಿ ದಾಖಲಿಸಲು ಸಿಬಿಐ ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ಇತ್ತ ಬೆಂಗಳೂರಿನಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧ ಜನಾರ್ದನ ರೆಡ್ಡಿ, ಅವರ ಪತ್ನಿ ಲಕ್ಷ್ಮಿ ಅರುಣಾ ಸೇರಿದಂತೆ ಒಟ್ಟು 21 ಮಂದಿಯ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದೀಗ ರೆಡ್ಡಿ ಪತ್ನಿಯ ಮೇಲೆ ಕರ್ನಾಟಕದಲ್ಲಿ ಎಫ್‌ಐಆರ್ ದಾಖಲಾಗಿರುವುದು ಗಣಿ ದೊರೆಗಳಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಲಕ್ಷ್ಮಿ ಅರುಣಾ ಅವರನ್ನು ಬೆಂಗಳೂರು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ರಾರಾಜಿಸುತ್ತಿದೆ.

ದಾಖಲಾರ್ಹ ಸಂಗತಿಯೆಂದರೆ ಮಾಜಿ ಸಚಿವ ವಿ. ಮುನಿಯಪ್ಪ ಅವರ ಹೆಸರೂ ಎಫ್‌ಐಆರ್ ನಲ್ಲಿ ಕಾಣಿಸಿಕೊಂಡಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಕಾಂಗ್ರೆಸ್‌ನ ವಿ. ಮುನಿಯಪ್ಪನವರಿಗೆ ಈ ಬಾರಿ ಅಕ್ರಮ ಗಣಿಗಾರಿಕೆಯ ಧೂಳು ಮೆತ್ತಿಕೊಂಡಿರುವುದು ಕಾಂಗ್ರೆಸ್‌ಗೆ ಮುಜುಗರವನ್ನುಂಟು ಮಾಡಿದೆ.

ಅಕ್ರಮ ಗಣಿಗಾರಿಕೆ, ಅದಿರು ರಫ್ತು, ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ, ಬಳ್ಳಾರಿ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸಿ, ಅರಣ್ಯ ಕಾಯ್ದೆಯನ್ನು ಮೀರಿ ಗಣಿಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಬಿಐನ ಡಿಜಿಪಿ ಹಿತೇಂದ್ರ, 21 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ, ಬಳ್ಳಾರಿಯಲ್ಲಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮುತ್ತಯ್ಯ, ಮಾಜಿ ಗಣಿ ಸಚಿವ ವಿ.ಮುನಿಯಪ್ಪ, ಗಣಿ ಮತ್ತು ಭೂವಿಜ್ಞ್ಞಾನ ಇಲಾಖೆಯ ನಿರ್ದೇಶಕ ಶಿವಲಿಂಗಮೂರ್ತಿ, ಜನಾದೇವಿ ಮಿನರಲ್ಸ್, ಲಕ್ಷ್ಮಿಅರುಣಾ ಮಿನರಲ್ಸ್, ಈಗಲ್ ಟ್ರೇಡರ್ಸ್‌ ಅಂಡ್ ಲಾಜಿಸ್ಟಿಕ್ಸ್, ಶಾಂತಾಲಕ್ಷ್ಮಿ ಜಯರಾಮ್, ವಿಜಯ ಮೈನಿಂಗ್ ಆಂಡ್ ಇನ್‌ಫ್ರಾಸ್ಟ್ರಕ್ಚರ್, ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಹಿಂದಿನ ಮಾಲೀಕರು, ದಿವಾಕರ್ ಮಿನರಲ್ಸ್ ಅಂಡ್ ಜಿಂಟೆಕ್ಸ್, ಬ್ರಹ್ಮಿಣಿ ಇಂಡಸ್ಟ್ರೀಸ್, ಐಎಲ್‌ಸಿ ಎಕ್ಸ್‌ಪೋರ್ಟ್ಸ್ ಅಂಡ್ ಟ್ರೇಡಿಂಗ್ ಸೇರಿದಂತೆ 21 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+