ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟಾಟಾ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು,
ನ 5: ಆತ್ಮಹತ್ಯಾ ರಾಜಧಾನಿ ಕುಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ನಿನ್ನೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತಾಂತ್ರಿಕ ಸಹಾಯಕನಾಗಿರುವ ತುಷಾರ್ ಭಾಟಿಯಾ(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾನ್ಪುರ ಮೂಲದ ತುಷಾರ್ ಮಾರತ್ ಹಳ್ಳಿಯ ನಿವಾಸಿ. id="toptextpromo">ತುಷಾರ್
ತನ್ನ ಕಚೇರಿಯ 9ನೇ ಮಹಡಿಯಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದ. ಕೋಮ ಸ್ಥಿತಿಯಲ್ಲಿದ್ದ ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. id='are-slot-1' class='oiad oi-axt oiadv'> id='top-searched-articles'>ಪ್ರಸಕ್ತ
ವರ್ಷದ ಫೆಬ್ರವರಿ ವೇಳೆಗೆ ಭಾಟಿಯಾ ಟಿಸಿಎಸ್ ಕಂಪನಿಯಲ್ಲಿ ಟೆಕ್ ಸಹಾಯಕನಾಗಿ ತರಬೇತಿ ಪಡೆಯುತ್ತಿದ್ದ. ಉದ್ಯಾನನಗರಿ ಇತ್ತೀಚೆಗೆ ಆತ್ಮಹತ್ಯಾ ನಗರವೆಂದು ಕುಖ್ಯಾತಿ ಪಡೆದುಕೊಳ್ಳುತ್ತಿದೆ. 2010ರಲ್ಲಿ 1,778 ಅತ್ಮಹತ್ಯಾ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿತ್ತು. (ಓದಿ: ಆತ್ಮಹತ್ಯಾ
ನಗರಿ
ಬೆಂಗಳೂರು)












Click it and Unblock the Notifications