ನೈಸ್ ಹೋರಾಟಗಾರನ ಕೊಲೆ: ಖೇಣಿ ಮೇಲೆ ಬಿತ್ತು ಎಫ್ಐಆರ್

Ashok Kheny
ರಾಮನಗರ ನ 4: ನೈಸ್ ವಿರುದ್ದ ಹೋರಾಟಗಾರ ಸಿದ್ದಲಿಂಗಪ್ರಭು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಚಿಕ್ಕಪ್ಪ ನೀಡಿದ ದೂರಿನನ್ವ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ಕೇಂದ್ರ ವಲಯ ಐಜಿಪಿ ನೋಟೀಸ್ ಜಾರಿ ಮಾಡಿದ್ದಾರೆ, ಅಲ್ಲದೆ ಇವರ ಮೇಲೆ ಎಫ್ಐಆರ್ ಕೂಡಾ ದಾಖಲಿಸಲಾಗಿದೆ. ಖೇಣಿ ಬಲಗೈ ಬಂಟ ಎನ್ನಲಾದ ರುದ್ರೇಶ್ ಅವರನ್ನೂ ಕೂಡ ತೀವ್ರ ವಿಚಾರಣೆಗೆ ಗುರಿ ಪಡಿಸಲಾಗಿದೆ.

ಕೇಂದ್ರ ವಲಯ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಈ ವಿಷಯವನ್ನು ಸ್ಪಷ್ಟ ಪಡಿಸುತ್ತಾ, ಅಕ್ಟೋಬರ್ 17ರಂದು ತಲಘಟಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ್‌ ಖೇಣಿ ಮತ್ತು ಕಂಠೀರವ ಸ್ಟುಡಿಯೋ ಅಧ್ಯಕ್ಷರ ವಿರುದ್ದವೂ ಎಫ್‌ಐಅರ್‌ ದಾಖಲಿಸಲಾಗಿದೆ. ವಿಚಾರಣೆ ತನಿಖಾ ಹಂತದಲ್ಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದವರೆಗೆ ಬಂಧನವಾದವರಲ್ಲಿ ಇಬ್ಬರು ಮೃತರ ಸಂಬಂಧಿ. ಆದರೆ ಖೇಣಿ ಅಥವಾ ರುದ್ರೇಶ್ ವಿರುದ್ದ ಸದ್ಯ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ.ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಿದ್ದರೆ ಎಸ್ಪಿಗಾಗಲಿ, ಡಿವೈಎಸ್‌ಪಿಗಾಗಲಿ, ಯಾವುದೇ ಪೊಲೀಸ್‌ ಅಧಿಕಾರಿಗಾಗಲಿ ಮಾಹಿತಿ ನೀಡಬಹುದು ಎಂದು ಮಾಲಿನಿ ಮನವಿ ಮಾಡಿದ್ದಾರೆ.

ದೇವೇಗೌಡರ ಪಾದಯಾತ್ರೆ: ಹತ್ಯೆ ಖಂಡಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತ್ರತ್ವದಲ್ಲಿ ಜನಪರ ಸಂಘಟನೆಗಳ ಒಕ್ಕೂಟ ಮತ್ತು ನೈಸ್ ಭೂಸ್ವಾಧೀನ ವಿರೋಧಿ ವೇದಿಕೆ ಇಂದು (ಶುಕ್ರವಾರ, ನ4) ಸಿದ್ದಲಿಂಗ ಪ್ರಭು ಸಮಾಧಿ ಸ್ಥಳದಿಂದ ಮುಖ್ಯಮಂತ್ರಿಗಳ ನಿವಾಸದ ವರೆಗೆ ಪಾದಯಾತ್ರೆ ನಡೆಸಲಿದೆ. ದೇವೇಗೌಡ ಪಾದಯಾತ್ರೆಯನ್ನು ಉದ್ಘಾಟಿಸಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+