ಅಮ್ಮಾ ಕನ್ನಿಮೋಳಿ, ಜನರು ನಿಮ್ಮ ಬಗ್ಗೆಯೂ ಹೀಗೇ ಕೇಳಿದ್ದರು!

ಒಂದತೂ ಸ್ಪಷ್ಟ. ಮಾಧ್ಯಮ ಕಣ್ಣೆದುರಿಗಿನ ವಿದ್ಯಮಾನಕ್ಕೆ ಸಾಕ್ಷೀಪ್ರಜ್ಞೆಯಾಗಿ ಕನ್ನಡಿ ಹಿಡಿಯುತ್ತದೆ ಅಷ್ಟೆ. ಅದು ಕನ್ನಿಮೋಳಿಯೂ ಆಗಿರಬಹುದು, ಯಡಿಯೂರಪ್ಪನೂ ಆಗಿರಬಹುದು ಅಥವಾ ಮತ್ಯಾವಪ್ಪನೂ ಸಹ ಆಗಿರಬಹುದು.
ಅಂಥ ಮಾಧ್ಯಮದ ಮೇಲೆ ನಿಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡು 'ನೀವು ಮನುಷ್ಯರಲ್ಲವೇ? ನಿಮಗೆ ಮನುಷ್ಯತ್ವ ಎಂಬುದೇ ಇಲ್ಲವೇ' ಎಂದು ರೇಗಿದರೆ ಏನು ಬಂತು ಪ್ರಯೋಜನ. ಮೊದಲು ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ತನ, ನಿಮ್ಮ ತನುವ-ಮನವ ಶುದ್ಧಿಸಿಕೊಳ್ಳಿ ಕನ್ನಿಮೋಳಿ, ಯಡಿಯೂರಪ್ಪಗಳಿರಾ!? ಎನ್ನದೇ ಬೇರೆ ವಿಧಿಯಿಲ್ಲ.
ಇಂದಿನ ನಿಮ್ಮ ದುಃಸ್ಥಿತಿಗೆ ಖಂಡಿತಾ ಮಾಧ್ಯಮ ಕಾರಣವಲ್ಲ. ಇದು ನಿಮ್ಮ ಸ್ವಯಂ ಕೃತಾಪರಾಧ. ನೀವು ಎಸಗಿದ ಅಪರಾಧ ಮಾಧ್ಯಮವೆಂಬ ಕನ್ನಡಿಯ ಮೂಲಕ ಪ್ರತಿಬಿಂಬಿಸಿದೆ ಅಷ್ಟೆ. ಸೋ ಬೆಟರ್ ಲಕ್ ಇನ್ ಹೈಯರ್ ಕೋರ್ಟ್, ಕನ್ನಿಮೋಳಿ.












Click it and Unblock the Notifications