ಶಾಸಕ ಮುನಿರಾಜುಗೆ ಉರುಳಾದ 'ಭೂಮಿ' ಕಥೆ

ಪುಟ್ಟಸ್ವಾಮಿ ಎಂಬುವರು ನೀಡಿರುವ ದೂರಿನ ಪ್ರಕಾರ ಅವರ ಅತ್ತೆ ಮಲ್ಲಮ್ಮ ಅವರ ಕುಟುಂಬ ಈ ಪ್ರದೇಶದಲ್ಲಿ ಸುಮಾರು 1 ಎಕರೆ ಜಮೀನು ಹೊಂದಿತ್ತು.
ಮಲ್ಲಮ್ಮ ಅವರಿಗೆ ಸೇರಿರುವ ಬೆಂಗಳೂರು ಉತ್ತರ ಯಶವಂತಪುರ ಹೋಬಳಿಯಲ್ಲಿರುವ 21 ಗುಂಟೆ ಭೂಮಿಯನ್ನು ಶಾಸಕ ಮುನಿರಾಜು ಅವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.(1 ಎಕರೆಗೆ 40 ಗುಂಟೆ)
Land Ceiling Act ಅಡಿಯಲ್ಲಿ 1995ರಲ್ಲಿ ಈ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಸರ್ಕಾರ ಈ ಕ್ರಮ ಪ್ರಶ್ನಿಸಿ ಮಲ್ಲಮ್ಮ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ 2006ರಲ್ಲಿ ಮಲ್ಲಮ್ಮ ತಮ್ಮ ವಶಕ್ಕೆ ನೀಡಲಾಗಿತ್ತು. ಆದರೆ ಕಂದಾಯ ಪತ್ರಗಳಲ್ಲಿ ಆಕೆ ಹೆಸರು ಮಾಯವಾಗಿತ್ತು.
ಕಂದಾಯ ಪತ್ರ, ಭೂ ಮಾಲೀಕತ್ವದ ಪುರಾವೆಗೆ ಮಲ್ಲಮ್ಮನ ಹೆಸರು ಸೇರಿಸುವುದು ಅವಶ್ಯಕವಾಗಿತ್ತು.
2009ರಲ್ಲಿ ಸದರಿ ಭೂಮಿ ತನಗೆ ಸೇರಿದ್ದು ಎಂದು ಶಾಸಕ ಮುನಿರಾಜು ಅವರು ದಾಖಲೆ ಒದಗಿಸಿ, ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications