ಬಿಜೆಪಿಯ 'ಭೂದಾಹ'ಕ್ಕೆ ಮತ್ತೊಂದು,ದಾಸರಹಳ್ಳಿ ಶಾಸಕರ ವಿರುದ್ದ ಕೇಸ್

BJP, Karnataka
ಬೆಂಗಳೂರು ನ 1: ಆಡಳಿತ ಬಿಜೆಪಿಯ ಭೂಹಗರಣ ಪಟ್ಟಿಗೆ ಇನ್ನೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್ ಮುನಿರಾಜ್ ವಿರುದ್ದ ಖಾಸಾಗಿ ದೂರು ದಾಖಲಾಗಿದೆ. ಯಶವಂತಪುರ ಹೋಬಳಿಯ ಕೆರ್ದಗುಡ್ಡದ ನಿವಾಸಿ ಪುಟ್ಟಸ್ವಾಮಿ ಎನ್ನುವವರು ಶಾಸಕ ಮತ್ತು ತಹಶೀಲ್ದಾರ್ ವಿರುದ್ದ ದೂರು ನೀಡಿದ್ದಾರೆ.

ದೂರು ನೀಡಿದ ಪುಟ್ಟಸ್ವಾಮಿಯವರ ಅತ್ತೆ ಮಲ್ಲಮ್ಮ ಅವರ ಹೆಸರಿನಲ್ಲಿರುವ ಕೆರ್ದಗುಡ್ಡದ ಆಸುಪಾಸಿನ ಸುಮಾರು ಒಂದು ಎಕರೆ ಜಮೀನನ್ನು ಶಾಸಕ ಮುನಿರಾಜ್ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಲು ಯತ್ನಿಸುತ್ತಿದ್ದಾರೆಂದು ದೂರಲಾಗಿದೆ.

ಭೂವಿವಾದ ಪ್ರಕರಣ ಸಂಬಂಧ ಅಧಿಕಾರ ದುರುಪಯೋಗ ಮಾಡಿರುವ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ದಾಸರಹಳ್ಳಿ ಶಾಸಕ ಎಸ್‌. ಮುನಿರಾಜು ಮತ್ತು ತಹಶೀಲ್ದಾರ್‌ ವಿರುದ್ಧ ಸೋಮವಾರ ಖಾಸಗಿ ದೂರು ನೀಡಲಾಗಿದೆ. ನ್ಯಾಯಾಧೀಶ ಸುಧೀಂದ್ರ ರಾವ್ ಪ್ರಕರಣದ ಸಂಬಂಧ ದೂರುದಾರರಲ್ಲಿ ಕೆಲ ಪ್ರಶ್ತ್ನೆಗಳನ್ನು ಕೇಳಿದರು. ಈ ಪ್ರಕರಣಕ್ಕೆ ಮಾನ್ಯತೆ ನೀಡಬೇಕೆ ಬೇಡವೇ ಎಂದು ಬುಧವಾರ (ನ 2) ದಂದು ಆದೇಶ ನೀಡುವುದಾಗಿ ನ್ಯಾಯಾಧೀಶರು ಹೇಳಿಕೆ ನೀಡಿದ್ದಾರೆ.

ಮಲ್ಲಮ್ಮ ಎನ್ನುವ ಕುಟುಂಬ ಈ ಪ್ರದೇಶದಲ್ಲಿ ಸುಮಾರು 1 ಎಕರೆ ಜಮೀನು ಹೊಂದಿತ್ತು. ಆದರೆ ಸರಕಾರ ಈ ಜಾಗವನ್ನು ಹೆಚ್ಚುವರಿ ಜಮೀನು ಹೊಂದಿರುವುದಕ್ಕಾಗಿ 1981 ರಲ್ಲಿ 'ಯುಎಲ್‌ಸಿ ಕಾಯಿದೆ'ಯಡಿ ಸ್ವಾಧೀನಪಡಿಸಿಕೊಂಡಿತ್ತು. ಸರಕಾರದ ಈ ಕ್ರಮ ಪ್ರಶ್ನಿಸಿ ಮಲ್ಲಮ್ಮ ಕುಟುಂಬ ಹೈಕೋರ್ಟ್‌ ಮೆಟ್ಟಿಲೇರಿದ್ದರು. 2005ರಲ್ಲಿ ತೀರ್ಪು ನೀಡಿದ ಹೈಕೋರ್ಟ್‌ ಈ ಜಮೀನು ಮಲ್ಲಮ್ಮ ಕುಟುಂಬಕ್ಕೆ ವಾಪಸ್‌ ನೀಡುವಂತೆ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಶಾಸಕ ಮುನಿರಾಜು ಆ ಜಾಗ ತಮಗೆ ಸೇರಿದ್ದು ಎಂದು ವಿವಾದ ಸೃಷ್ಟಿಸಲಾರಂಭಿಸಿದರು. ಆ ಜಾಗವನ್ನು ಶಾಸಕರು ಕೇಶವಮೂರ್ತಿ ಎಂಬವರಿಂದ ಖರೀದಿಸಿದಾಗಿ ಹೇಳಿ ನಕಲಿ ದಾಖಲೆ ಸೃಷ್ಟಿಸಿಕೊಂಡು ತಮ್ಮ ಹೆಸರಿಗೆ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನುವುದು ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+