ಬೆಂಗಳೂರಿನ ಮೂರು ಟೆಕ್ಕಿಗಳು ಚೆನ್ನೈನಲ್ಲಿ ಸಮುದ್ರಪಾಲು

3 Bangalore techies drown in Chennai beach
ಚೆನ್ನೈ, ನ. 01 : ಸುದೀರ್ಘ ವಾರಾಂತ್ಯದ ರಜಾ ಸಮಯದಲ್ಲಿ ಸಮುದ್ರವಿಹಾರಕ್ಕೆಂದು ಹೋಗಿದ್ದ ಕರ್ನಾಟಕದ ಮೂವರು ಸಾಫ್ಟ್ ವೇರ್ ಇಂಜಿನಿಯರುಗಳು ಸಮುದ್ರಪಾಲಾದ ದುರ್ಘಟನೆ ಚೆನ್ನೈ ಬಳಿಯ ತಿರುವನ್ಮಿಯೂರ್ ಬೀಚ್ ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಶಕ್ತಿ (22), ಬೆಂಗಳೂರಿನ ಜಿ. ಪ್ರವೀಣ್ (21) ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆನಂದ್ ಭೂಷಣ್ (21) ಎಂದು ಗುರುತಿಸಲಾಗಿದೆ. ಮೂವರೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳಾಗಿ ಕೆಲಸದಲ್ಲಿದ್ದರು.

ಮೂವರು ಟೆಕ್ಕಿಗಳು ರಜಾದಿನಗಳನ್ನು ಕಳೆಯಲು ಚೆನ್ನೈಗೆ ಹೋಗಿದ್ದರು. ಸಮುದ್ರತೀರದಲ್ಲಿ ಆಟವಾಡುತ್ತಿದ್ದಾಗ ಬಲವಾದ ಅಲೆಗಳು ಅವರನ್ನು ಸೆಳೆದೊಯ್ದಿವೆ. ಅವರ ಕಿರುಚಾಟ ಕೇಳಿ ತೀರದಲ್ಲಿದ್ದವರು ಶಕ್ತಿಯನ್ನು ಎಳೆದುತಂದಿದ್ದಾರೆ. ಅಡ್ಯಾರ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸುವ ದಾರಿಯಲ್ಲಿ ಶಕ್ತಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ಇಳಿಸಂಜೆಯಲ್ಲಿ ಪ್ರವೀಣ್ ಶವ ಕೊಟ್ಟಿವಕ್ಕಂ ಸಮುದ್ರತೀರದಲ್ಲಿ ದೊರೆತಿದೆ. ಆನಂದ್ ಭೂಷಣ್ ಅವರ ಶವ ಸೋಮವಾರ ಬೆಳಿಗ್ಗೆ ತಿರುವನ್ಮಿಯೂರ್ ಬೀಚ್ ನಲ್ಲಿ ದೊರೆತಿದೆ. ಪೋಸ್ಟ್ ಮಾರ್ಟಂ ನಡೆಸಿದ ಮೇಲೆ ಮೂವರು ಟೆಕ್ಕಿಗಳ ಶವಗಳನ್ನು ಅವರ ವಾರಸುದಾರರಿಗೆ ಒಪ್ಪಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+