ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಿರು ಬಳಸದೆ ಉಕ್ಕು ತಯಾರಿಸುವುದು ಹೇಗೆ?

|
Google Oneindia Kannada News

Vallabhbhai Jhaverbhai Patel
ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಹುಟ್ಟುಹಬ್ಬ(ಅ. 31, 1875). ನಿಜ ಅವರು ಹುಟ್ಟಿ 136 ವರ್ಷಗಳು ಕಳೆದಿವೆ. ಈ ಕಾಲದಲ್ಲಿ ಗಣಿ ಮನುಷ್ಯರು, ಸ್ಪೆಕ್ಟ್ರಮ್ ಮನುಷ್ಯರು ಮತ್ತಿರರ "ಮನುಷ್ಯರ" ನಡುವೆ ಹೆಚ್ಚಿನವರು ಈ ಉಕ್ಕಿನ ಮನುಷ್ಯನ ಹುಟ್ಟುಹಬ್ಬ ಮರೆತೇ ಇರಬಹುದು.

ಸರ್ದಾರ್ ವಲ್ಲಭಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ ಊರಿನಲ್ಲಿ. ಬದುಕು ಆರಂಭಿಸಿದ್ದು ವಕೀಲ ವೃತ್ತಿಯಿಂದ. ತನ್ನ ಹುದ್ದೆ, ಅಧಿಕಾರ, ಸಂಪತ್ತು ಎಲ್ಲವನ್ನೂ ಬಿಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ನಂತರ ಕಾಂಗ್ರಸ್ ಸೇರಿಕೊಂಡರು.

ಪ್ರಧಾನಿ ಹುದ್ದೆಯೂ ಇವರಿಗೆ ಸಿಗಬೇಕಿತ್ತು. ಆದರೆ ಗಾಂಧೀಜಿಯ ಒತ್ತಾಯದ ಮೇರೆಗೆ ಪ್ರಧಾನಿ ಪಟ್ಟದ ಆಸೆ ಬಿಟ್ಟರು. ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತದ ವಿಭಜನೆಗೆ ಒಪ್ಪಿದ ಪ್ರಮುಖ ಕಾಂಗ್ರೆಸಿಗರಲ್ಲಿ ಪಟೇಲ್ ಒಬ್ಬರು. ವಿಭಜನೆಯ ನಂತರದ ಆಸ್ತಿಪಾಸ್ತಿ ಸಮರ್ಥ ಹಂಚಿಕೆಗೆ ಇವರೇ ಕಾರಣ. ಪಾಕಿಸ್ತಾನದ ಗಾತ್ರಕ್ಕೆ ಅನುಗುಣವಾಗಿ ಸಂಪತ್ತು ಹಂಚಿಕೆ ಮಾಡುವಲ್ಲಿ ಇವರದು ಪ್ರಮುಖ ಪಾತ್ರ.

ಗುಜರಾತಿನ ಜನರು ಇವರಿಗೆ ಸರ್ದಾರ್ ಎಂದು ಬಿರುದು ನೀಡಿದ್ದಾರೆ. ಪುಟ್ಟಪುಟ್ಟ ರಾಜ್ಯಗಳನ್ನು ಒಂದುಗೂಡಿಸಿದ್ದ ದಿಟ್ಟ ಸಾಹಸಕ್ಕೆ ಇವರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. 1991ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಇವರಿಂದ ನಮ್ಮ ಸದ್ಯದ ರಾಜಕಾರಣಿಗಳು ಕಲಿಯಬೇಕಾದ್ದು ಸಾಕಷ್ಟಿದೆ.

ಹುಟ್ಟು ಹಬ್ಬದ ದಿನದ ನೆಪದಲ್ಲಿಯಾದರೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನಪಿಸಿಕೊಳ್ಳೋಣ.

English summary
Happy Birthday Vallabhbhai Jhaverbhai Patel. Iron Man Of the India, Vallabhbhai Patel born 31th October(1875). Patel was one of the leaders of the Indian National Congress. He is known to be a social leader of India who played a major role in the country's struggle for Independence. Here is more information about Iron Man Of the India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X