ನ.3 ರ ತನಕ ಯಡಿಯೂರಪ್ಪಗೆ ದೀಪಾವಳಿ ರಜೆ

ದೀಪಾವಳಿ ಮೂಡ್ ನಲ್ಲಿರುವ ಬಿಎಸ್ ವೈಗೆ ಕೊಂಚ ರಿಲೀಫ್ ಸಿಕ್ಕಿದೆ. ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ(ಅ.28) ಹೈಕೋರ್ಟ್ ನಲ್ಲಿ ನಡೆಯಿತು.
ಸಿರಾಜಿನ್ ಬಾಷಾ ಸಲ್ಲಿಸಿರುವ 2, 3, 6 ನೇ ದೂರಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಜಾಮೀನು ನೀಡದಿರುವಂತೆ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್ ಹನುಮಂತರಾಯ ಅವರು ಈಗಾಗಲೇ ವಾದ ಮಂಡಿಸಿದ್ದಾರೆ.
ಯಡಿಯೂರಪ್ಪ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯಪೀಠ ಮುಂದಿನ ವಿಚಾರಣೆಯನ್ನು ನ.3ಕ್ಕೆ ಮುಂದೂಡಿದೆ. ಉಳಿದ ದೂರುಗಳ ಅರ್ಜಿ ವಿಚಾರಣೆ ಕೂಡಾ ಮುಂದಕ್ಕೆ ಹೋಗಿದ್ದು ನ. 11ಕ್ಕೆ ಮುಂದೂಡಿ ನ್ಯಾಯಮೂರ್ತಿ ಬಿವಿ ಪಿಂಟೋ ಆದೇಶ ನೀಡಿದ್ದಾರೆ.
ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಪೂರ್ಣ ಪ್ರಮಾಣದ ಜಾಮೀನು ಅರ್ಜಿಯನ್ನು ಯಡಿಯೂರಪ್ಪ ಪರ ವಕೀಲ ಜಯಕುಮಾರ್ ಪಾಟೀಲ್ ಸಲ್ಲಿಸಿದ್ದರು. ಯಡಿಯೂರಪ್ಪ ಅವರ ವಿರುದ್ಧ ಸಿರಾಜಿನ್ ಬಾಷಾ ಅವರು ಒಟ್ಟು 15 ಕೇಸುಗಳು, 5 ದೂರುಗಳನ್ನು ಲೋಕಾಯುಕ್ತ ಕೋರ್ಟ್ ಗೆ ನೀಡಿದ್ದಾರೆ.












Click it and Unblock the Notifications