ಯಡಿಯೂರಪ್ಪಗೆ ದೀಪಾವಳಿ ಸಿಹಿ ಕೊಟ್ಟ ಶೋಭಾ

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜಾಮೀನು ಸಿಗದೆ, ಪರಪ್ಪನ ಅಗ್ರಹಾರದ ಪ್ರಶಸ್ತವಾದ ಕೊಠಡಿಯಲ್ಲಿ ನ್ಯಾಯಾಂಗ ಬಂಧನ ಅನುಭವಿಸುತ್ತಿರುವ ಯಡಿಯೂರಪ್ಪ ಅವರಿಗೆ ಶೋಭಾ ಭೇಟಿ ಸಮಾಧಾನ ತಂದಿದೆ.
ನರಕ ಚತುದರ್ಶಿ ದಿನದಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶೋಭಾ ಮನೆ ಅಡುಗೆಯನ್ನು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಮೊದಲ ಬಾರಿಗೆ ಕೊಠಡಿಯಿಂದ ಹೊರಬಿದ್ದ ಬಿಎಸ್ ವೈ ಡಿಐಜಿ ಅಬ್ಬಾಯಿ ಅವರ ಕೊಠಡಿಯಲ್ಲಿ ಶೋಭಾ ಅವರನ್ನು ಭೇಟಿ ಮಾಡಿದರು ಎನ್ನಲಾಗಿದೆ.
ಶೋಭಾ ಅವರು ಕೊಟ್ಟ ಸಿಹಿ ತಿಂದ ಯಡಿಯೂರಪ್ಪ ಅವರಿಗೆ ಜೈಲು ಅಧಿಕಾರಿಗಳು ನಂತರ ಕೊಟ್ಟ ಪಾಯಸ ರುಚಿಸಲೇ ಇಲ್ಲವಂತೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಯಡಿಯೂರಪ್ಪ ಅವರು ಸಪ್ಪೆ ಪಾಯಸ ಸವಿದು ಸರಿಯಾಗಿ ಸಿಹಿ ಮಾಡೋಕೆ ಬರೋಲ್ಲ ಇಲ್ಲಿಯವರಿಗೆ ಎಂದು ಗೊಣಗಾಡಿದರಂತೆ.












Click it and Unblock the Notifications