ವೈದ್ಯಕೀಯ ಪರೀಕ್ಷೆಯ ರೂವಾರಿ ವಿನಾಯಕ ಶರಣು

Dr. Vinayaka Prasanna
ಬಳ್ಳಾರಿ, ಅ. 25 : ವೈದ್ಯಕೀಯ ಪರೀಕ್ಷಾ ಹಗರಣದ ಪ್ರಮುಖ ರೂವಾರಿ, ಸಿಓಡಿ ಪೊಲೀಸರ 'ಮೋಸ್ಟ್ ವಾಂಟೆಡ್" ಆಗಿದ್ದ ಬಳ್ಳಾರಿಯ ಡಾ. ವಿನಾಯಕ ಪ್ರಸನ್ನ ಮಂಗಳವಾರ ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ.

ಸಿಓಡಿ ಐಜಿ ಶಂಕರ ಬಿದರಿ ಅವರು ಡಾ. ವಿನಾಯಕ ಪ್ರಸನ್ನ ಅವರ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ ನಂತರ, ವಿನಾಯಕ ಪ್ರಸನ್ನ ಆತಂಕದಲ್ಲೇ ತಲೆ ಮರೆಯಿಸಿಕೊಂಡಿದ್ದರು.

ಮಂಗಳವಾರ ಬೆಳಗ್ಗೆ ಸ್ನಾನ ಪೂಜೆಗಳನ್ನು ಸಲ್ಲಿಸಿ, ಅವರ ಮನೆ ಸಮೀಪದ ಸಣ್ಣ ದುರ್ಗಮ್ಮ ಮತ್ತು ದೊಡ್ಡ ದುರ್ಗಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ನೇರವಾಗಿ ಸಮೀಪದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶರಣಾಗಿದ್ದಾರೆ.

ಪೊಲೀಸರಿಗೆ ಶರಣಾದ ಡಾ. ವಿನಾಯಕ ಪ್ರಸನ್ನ ಅವರನ್ನು ಪೊಲೀಸರು ಜೆಎಂಎಫ್‌ಸಿ 2ನೇ ನ್ಯಾಯಾಲಯದ ನ್ಯಾಯಾಧೀಶ ಕುಲಕರ್ಣಿ ಅವರ ಮನೆಗೆ ಕರೆದುಕೊಂಡು ಹೋದರು. ನ್ಯಾಯಾಧೀಶರು ಆರೋಪಿ ಡಾ. ವಿನಾಯಕ ಪ್ರಸನ್ನ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+