ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಧಿಕಾಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಹಿಂದೂ ಕಾಯ್ದೆ

By Mahesh
|
Google Oneindia Kannada News

Radhika
ಬೆಂಗಳೂರು, ಅ.24: ಎಚ್ ಡಿ ಕುಮಾರಸ್ವಾಮಿ ಅವರಿಗೆ ಧರ್ಮಪತ್ನಿ ಅನಿತಾ ಅವರಿಂದ ಅಭಯ ಸಿಕ್ಕಿರುವುದು ಬಲವಾದ ಕಾರಣವೂ ಇದೆ. ಅದಕ್ಕೂ ಮೊದಲು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಕೇಸ್ ನೋಡೋಣ...

ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸುವಾಗ ರಾಜತಿ ಅಮ್ಮಾಳ್ ಯಾರು ಎಂಬುದಕ್ಕೆ ನನ್ನ ಮಗಳು ಕನ್ನಿಮೋಳಿ ಅಮ್ಮ ಎಂದು ದಾಖಲಿಸಿದ್ದರು. ಕರುಣಾನಿಧಿ ಅವರ ಮೊದಲ ಪತ್ನಿ ದಯಾಳು ಅಮ್ಮಾಳ್ ದಯೆ ಇದ್ದುದ್ದರಿಂದ ಕರುಣಾನಿಧಿ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳುತ್ತಾರೆ.

ದ್ವಿಪತ್ನಿತ್ವ Cognizable offence ಅಲ್ಲ. ದಂಡಾಧಿಕಾರಿಗಳ ಅಪ್ಪಣೆಯಿಲ್ಲದೆ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಂತಿಲ್ಲ. ಇದನ್ನು Cognizable offence ಆಗಿ ಪರಿಗಣಿಸಬೇಕು ಎಂದು ಎಆರ್ ಲಕ್ಷ್ಮಣನ್ ಅವರ ಸಮಿತಿ ಸೂಚಿಸಿತ್ತು. ಆದರೆ, ಇದು ಕಾರ್ಯಗತವಾಗಿಲ್ಲ.

ಅನಿತಾಕ್ಕನಿಗೂ ಇದೆ ಕಾನೂನಿನ ಅರಿವು: ರಾಧಿಕಾ ಅವರು ಕುಮಾರಸ್ವಾಮಿ ಅವರ ಎರಡನೇ ಪತ್ನಿಯಾಗಿ ಇರಲು ಅನಿತಾ ಅವರು ಒಪ್ಪಿಗೆ ನೀಡದರೂ ರಾಧಿಕಾ ಅವರಿಗೆ ಕಾನೂನು ಪ್ರಕಾರ ಯಾವುದೇ ಅಧಿಕಾರ ಇರುವುದಿಲ್ಲ.

ರಾಧಿಕಾ ಅವರ ಹೆಸರಿಗೆ ಏನು ಬರೆಯ ಬೇಕಾದರೂ ಅನಿತಾ ಅವರ ಒಪ್ಪಿಗೆಯನ್ನು ಕುಮಾರಸ್ವಾಮಿ ಪಡೆಯಬೇಕಾಗುತ್ತದೆ ಎಂದರೆ ಅನಿತಾ ಮೇಡಂ ಮುಂದೆ ರಾಧಿಕಾ ಹಾಗೂ ಕುಮಾರಸ್ವಾಮಿ ಸ್ಥಾನದ ಬಗ್ಗೆ ಊಹಿಸಬಹುದು. ಕುಟ್ಟಿ ರಾಧಿಕಾ, ಅನಿತಾ ಮೇಡಂ ಮುಂದೆ 'ಕುಟ್ಟಿ'ಯೇ ಹೌದು.

ಹಿಂದೂ ಕಾಯಿದೆ ಪ್ರಕಾರ: ವ್ಯಕ್ತಿಯ ಧರ್ಮಪತ್ನಿ(ಮೊದಲ ಪತ್ನಿ) ಮಾತ್ರ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಿಗೆ ಹಕ್ಕುದಾರಳಾಗಿರುತ್ತಾಳೆ. ಉಯಿಲು ಬರೆದರೆ ಮಾತ್ರ ಎರಡನೇ ಪತ್ನಿಗೆ ಏನಾದರೂ ಸಿಗುತ್ತದೆ ಇಲ್ಲದಿದ್ದರೆ ಆಸ್ತಿ ಪಾಸ್ತಿಯಲ್ಲಿ ಚಿಕ್ಕಾಸು ಸಿಗುವುದಿಲ್ಲ. ಇನ್ನೊಂದು ದುರಂತ ವೆಂದರೆ ಎರಡನೇ ಪತ್ನಿಗೆ ಜೀವನಾಂಶ(alimony) ಕೂಡಾ ನೀಡುವಂತಿಲ್ಲ.

ಭಾರತದಲ್ಲಿ ಮುಸ್ಲಿಂ ಕಾಯಿದೆಯಲ್ಲಿ ಮಾತ್ರ ಬಹುಪತ್ನಿತ್ವ ಹಾಗೂ ಜೀವನಾಂಶ ಪದ್ಧತಿ ಇನ್ನೂ ಜಾರಿಯಲ್ಲಿದೆ.

ಆದರೆ, ಕರುಣಾನಿಧಿ ಮಾತ್ರ ಚಾಣಕ್ಷ ರಾಜಕಾರಣಿ ಹಾಗೂ ಪತಿ. ರಾಜತಿ ಅಮ್ಮಾಳ್ ಹೆಸರಿಗೆ 20.83 ಕೋಟಿ ರು ಹಾಗೂ ದಯಾಳು ಅಮ್ಮಾಳ್ ಹೆಸರಿಗೆ 15.34 ಕೋಟಿ ರು ಬರೆದರೂ ವ್ಯಾಜ್ಯಗಳಾಗದಂತೆ ಸಂಭಾಳಿಸಿದ್ದಾರೆ. ರಾಜತಿ ಅಮ್ಮಾಳ್ ಹೆಣ್ಣು ಹೆತ್ತವಳು ಹಾಗಾಗಿ ಹೆಚ್ಚಿಗೆ ಷೇರು ಕೊಟ್ಟಿದ್ದೀನಿ ಎಂದು ಎಲ್ಲರ ಬಾಯಿ ಮುಚ್ಚಿಸಿಬಿಟ್ಟಿದ್ದಾರೆ ಕರುಣಾನಿಧಿ.

English summary
A Bangalore based advocate Shashidhar Belagumba has filed a public interest writ petition before the Karnataka High Court accusing of former chief minister HD Kumaraswamy's bigamy, under ipc section 494,495 but HDK wife Anitha holds the key according to Hindu act in this case not court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X