'ಭೂಗಳ್ಳ ಚಿಕ್ಕಮಂಗಳೂರು ಸಿ.ಟಿ. ರವಿನೂ ಜೈಲುಪಾಲು'

ಜೆ.ಡಿ.ಎಸ್. ಕಾರ್ಯಕರ್ತರ ಹೋಬಳಿ ಸಮಾವೇಶ ಉದ್ಘಾಟಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಮಾತನಾಡುತ್ತ ಭೂಗಳ್ಳರಾದ ಶಾಸಕರಾದ ಸಿ.ಟಿ. ರವಿ, ಎಂ.ಪಿ. ಕುಮಾರಸ್ವಾಮಿ ಹಾಗೂ ಜೀವರಾಜ್ ಅವರು ಜೈಲಿಗೆ ಹೋಗುವ ದಿನಗಳು ದೂರವಿಲ್ಲ. ಸದ್ಯದಲ್ಲಿ ನೆಲಗಳ್ಳ ಅಶೋಕ್‌ಗೆ ಜೈಲಿನ ಬಾಗಿಲು ಈಗಾಗಲೇ ತೆರೆದುಕೊಂಡಿದೆ ಎಂದು ಅವರು ಹೇಳಿದರು.
ನೂರಾರು ಕೋಟಿ ನುಂಗಿ ನೀರು ಕುಡಿದಿರುವ ಈ ಭ್ರಷ್ಟರ ಬಗ್ಗೆ ಜಿಲ್ಲೆಯ ಜನತೆ ಮೌನವಾಗಿರುವುದು ವಿಷಾದದ ಸಂಗತಿ . ಜೆಡಿಎಸ್ ನಡೆಸುತ್ತಿರುವ ಈ ನಿರಂತರ ಹೋರಾಟ ಯಾವುದೇ ಚುನಾವಣೆಗೋಸ್ಕರ ಅಲ್ಲ. ನಮ್ಮ ಹೋರಾಟ ರೈತರ ಅಲ್ಪಸಂಖ್ಯಾತರ ಕೂಲಿಕಾರ್ಮಿಕರ, ದಲಿತರ ಪರವಾದ ಹೋರಾಟ ಎಂದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್.ಉಮಾಪತಿ ಮಾತನಾಡಿ ಕೇಂದ್ರ ಮಂತ್ರಿಗಳಾದ ಎ.ರಾಜಾ, ಕನ್ನಿಮೋಳಿ, ದಯಾನಿಧಿ ಮಾರನ್ ಸೇರಿದಂತೆ ಈ ತ್ರಿಮೂರ್ತಿ ಶಾಸಕರೂ ಜೈಲು ಸೇರುವ ದಿನಗಳು ದೂರವಿಲ್ಲ ಎಂದು ಹೇಳಿದರು. ಸಾಮಾನ್ಯ ಬಡ ಕುಟುಂಬದಿಂದ ಬಂದ ಇವರುಗಳು ಇಂದು ಕೋಟ್ಯಾಂತರ ರೂ. ಹಣ ಗಳಿಸಿದ್ದು ಹೇಗೆ ಎಂಬುದನ್ನು ಜನತೆಯ ಮುಂದೆ ಸಾಬೀತು ಪಡಿಸುವಂತೆ ಅವರು ಸವಾಲು ಹಾಕಿದರು.












Click it and Unblock the Notifications