ಬೆಂಗಳೂರಿನ ಅ.30ರ ಅಡ್ವಾಣಿ ಸಮಾವೇಶ ರದ್ದು

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭ್ರಷ್ಟಾಚಾರ ವಿರೋಧ ಕಾನೂನಿನಡಿ ಜೈಲು ಸೇರಿದ್ದು ಅಡ್ವಾಣಿಯವರಿಗೆ ಭಾರೀ ಮುಜುಗರ ತಂದಿರುವುದು ಒಂದೆಡೆಯಾದರೆ, ಈ ಸಮಾವೇಶದ ಉಸ್ತುವಾರಿ ವಹಿಸಿಕೊಳ್ಳಬೇಕಾಗಿದ್ದ ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಪ್ರಮುಖ ಕಾರಣವಾಗಿದೆ.
ಭ್ರಷ್ಟಾಚಾರದ ವಿರುದ್ಧವೇ ಹೋರಾಟ ಆರಂಭಿಸಿರುವ ಅಡ್ವಾಣಿಗೆ ಇಲ್ಲಿ ಬಂದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರ ಕುರಿತಂತೆ ಪ್ರಶ್ನೆಗಳೇಳುವುದು ಸಹಜ. ಇದನ್ನು ತಪ್ಪಿಸಲೆಂದೇ ಸಮಾವೇಶವನ್ನು ರದ್ದುಪಡಿಸಲಾಗಿದೆ. ಕೆಲ ದಿನಗಳ ಹಿಂದೆ ಕೂಡ, ಯಡಿಯೂರಪ್ಪನವರಿಂದಾಗಿರುವ ಮುಜುಗರ ತಪ್ಪಿಸಿಕೊಳ್ಳಲೆಂದೇ ಮಧ್ಯಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನು ಅಡ್ವಾಣಿ ತಪ್ಪಿಸಿಕೊಂಡಿದ್ದರು.
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ವಿರುದ್ಧ ಈಗಾಗಲೆ ತನಿಖೆಗೆ ಆದೇಶ ನೀಡಲಾಗಿದೆ. ಅವರೇ ಗೃಹ ಸಚಿವರಾಗಿರುವುದರಿಂದ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಲು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷ ದುಂಬಾಲು ಬಿದ್ದಿದೆ.












Click it and Unblock the Notifications