ಮೈಸೂರು:ಅಂತಿಮ ಹೋರಾಟಕ್ಕೆ ಸಜ್ಜಾದ ಸರಿತಾ

ಅ.19ರಿಂದ ಕ್ರಾಫರ್ಡ್ ಭವನದ ಎದುರು ತನ್ನ ಪತ್ನಿ ಸರಿತಾ ಜತೆಗೂಡಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಸರಿತಾ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಏಳು ತಿಂಗಳಾಗಿದೆ.
ವಿವಿ ರಕ್ಷಣೆಯಲ್ಲಿ ಪ್ರೊಫೆಸರ್ : ಕಳಂಕಿತ ಪ್ರೊಫೆಸರ್ ವಿರುದ್ಧ ಕ್ರಮ ಜರುಗಿಸುವ ಬದಲು ಅವರಿಗೆ ವಿಶ್ವ ವಿದ್ಯಾಲಯ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಸರಿತಾ ಪತಿ ವಿಜಯಕುಮಾರ್ ಹೇಳಿದ್ದಾರೆ.
ಅಮಾನತು ಆದೇಶ ರದ್ದು ಮಾಡಿ ಆರೋಪಿ ಪ್ರೊ.ಶಿವಬಸವಯ್ಯರನ್ನು ವಿವಿಯ ಪ್ರತಿಷ್ಠಿತ ಪ್ರಸಾರಾಂಗದ ನಿರ್ದೇಶಕರ ಹುದ್ದೆಗೆ ಭಡ್ತಿ ನೀಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ವಿಶೇಷ ಸಮಿತಿಯು ಪ್ರೊ.ಶಿವಬಸವಯ್ಯ ತಪ್ಪಿತಸ್ಥ ಎಂದು ವರದಿ ನೀಡಿದೆ. ಮಹಿಳಾ ದೌರ್ಜನ್ಯ ನಿಯಂತ್ರಣ ಸಮಿತಿ ನಿಷ್ಪಕ್ಷಪಾತವಾಗಿ ತೀರ್ಪು ನೀಡಿದ ನಂತರವಾದರೂ ಅಪರಾಧಿಗೆ ಶಿಕ್ಷೆಯಾಗಿಲ್ಲ.
ವಿವಿಯ ಸಿಂಡಿಕೇಟ್ ನಮಗೆ ನ್ಯಾಯ ದೊರಕಿಸಿಕೊಡುವುದರಲ್ಲಿ ವಿಫಲವಾದರೂ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರಕುತ್ತದೆ. ಇದರ ಜತೆಗೆ ನಾಗರೀಕ ಸಮಾಜ ನಮ್ಮ ನೈತಿಕ ಬಲವನ್ನು ಹೆಚ್ಚಿಸಿದೆ ಎಂದು ವಿಜಯ್ ಕುಮಾರ್ ಹೇಳಿದರು.












Click it and Unblock the Notifications