ತಾಕತ್ತಿದ್ದರೆ ಕಲ್ಲಿದ್ದಲಿಗಾಗಿ ಕೇಂದ್ರಕ್ಕೆ ಆಗ್ರಹಿಸಿ: ಸಿದ್ದರಾಮಯ್ಯಗೆ ಎಚ್ ಡಿಕೆ ಸಲಹೆ
ಬೆಂಗಳೂರು,
ಅ.18: ಒಂದೆಡೆ ಸಿದ್ದರಾಮಯ್ಯ ವಿದ್ಯುತ್ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲು ತುರ್ತು ಅಧಿವೇಶನ ಕರೆಯಲು ಆಗ್ರಹಿಸುತ್ತಿದ್ದಾರೆ. ಆದರೆ ವಿದ್ಯುತ್ ಸಮಸ್ಯೆಗೆ ಕಾರಣವೇ ಕಾಂಗ್ರೆಸ್. ಕಾಂಗ್ರೆಸ್ ನಾಯಕರಿಗೆ ಸಮಸ್ಯೆಗೆ ಪರಿಹಾರ ಕಾಣುವ ಇಚ್ಛೆಯಿದ್ದರೆ ಮೊದಲು ರಾಜ್ಯಕ್ಕೆ ಸರಬರಾಜಾಗಬೇಕಾದ ಕಲ್ಲಿದ್ದಲನ್ನು ಪೂರೈಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಸಲಹೆ ನೀಡಿದರು. id="toptextpromo">ಬಿಜೆಪಿ
ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿದ್ದು ಎಷ್ಟು ಹೋರಾಟ ನಡೆಸಿದೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಮತ್ತಿತರರು ಹಾಜರಿದ್ದರು. id='are-slot-1' class='oiad oi-axt oiadv'> id='top-searched-articles'>ತಾನು
ಯಡಿಯೂರಪ್ಪರ ಪರವಾಗಿ ಯಾವುದೇ ರೀತಿಯ ಹೇಳಿಕೆ ನೀಡುತ್ತಿಲ್ಲ. ಆದರೆ ಅವರಿಂದ ಲಾಭ ಪಡೆದ ಕಾಂಗ್ರೆಸ್, ಈಗ ಜಯೋತ್ಸವ ಆಚರಿಸುತ್ತಿರುವುದನ್ನು ಟೀಕಿಸುತ್ತಿದ್ದೇನೆ ಎಂದರು. ಯಡಿಯೂರಪ್ಪ ಜೈಲು ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಅದರ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಆದರೆ ಕಾಂಗ್ರೆಸ್‌ನ ನಿಜ ಬಣ್ಣ ಸದ್ಯದಲ್ಲಿಯೇ ಬಯಲುಗೊಳಿಸುತ್ತೇನೆ ಎಂದು ಅವರು ಎಚ್ಚರಿಸಿದರು.











Click it and Unblock the Notifications