ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮಾ.ಮು. ಕುಮಾರಸ್ವಾಮಿ
ಬೆಂಗಳೂರು,
ಅ.18: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಕೆಲಸ ಕಾರ್ಯಗಳನ್ನು ರಾತ್ರೋರಾತ್ರಿ ಮಾಡಿಸುತ್ತಿದ್ದ ಕಾಂಗ್ರೆಸ್ ನಾಯಕರಿಂದು ಬಿಜೆಪಿ ಸರಕಾರ ವಜಾಗೊಳಿಸಲು ಆಗ್ರಹಿಸುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಮೊದಲು ಹಗರಣದ ಸುಳಿಯಲ್ಲಿ ಸಿಲುಕಿರುವ ಯುಪಿಎ ಸರಕಾರವನ್ನು ವಜಾಗೊಳಿಸಲು ಆಗ್ರಹಿಸಲಿ ಎಂದು ಮಾ.ಮು. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. id="toptextpromo">ಜೆಡಿಎಸ್
ಕಚೇರಿಯಲ್ಲಿಂದು ಬಿಜೆಪಿ ಮುಖಂಡ ಶ್ರೀನಿವಾಸ್ ಜೆಡಿಎಸ್‌ಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಬೇರೆಯವರ ವಿರುದ್ಧ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>
ಕಾಂಗ್ರೆಸ್
ನಾಯಕರು ಅರ್ಧ ರಾತ್ರಿ ಯಡಿಯೂರಪ್ಪರ ಮನೆಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸುತ್ತಿದ್ದರು. ಆಗ ಅವರಿಗೆ ಯಡಿಯೂರಪ್ಪ ಒಳ್ಳೆಯವರಾಗಿದ್ದರು. ಈಗ ಜೈಲಿಗೆ ಹೋದ ತಕ್ಷಣ ಇವರಿಗೆ ಕೆಟ್ಟವರಾಗಿದ್ದಾರೆ ಎಂದರು.











Click it and Unblock the Notifications