ರಾಜ್ಯಪಾಲ ಭಾರದ್ವಾಜ್ ವಿರುದ್ದ ಕ್ರಿಮಿನಲ್ ಕೇಸ್

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಅಕ್ರಮ ಆಸ್ತಿ ಸಂರಕ್ಷಿಸಲು ಸಹಕರಿಸದ ಆರೋಪದ ಮೇಲೆ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಶ್ವನಾಥ್ ಚತುರ್ವೇದಿ ದೆಹಲಿಯ ತಿಲಕ್ ಮಾರ್ಗ್ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಭಾರತ ಮತ್ತು ಅಮೇರಿಕ ಅಣು ಒಪ್ಪಂದದ ಕುರಿತು ಯುಪಿಎ ಸರಕಾರವನ್ನು ರಕ್ಷಿಸಲು ಮುಲಾಯಂ ಸರಕಾರದ ಪರ ಬೆಂಬಲಕ್ಕೆ ನಿಂತಿದ್ದರು. ಅದಕ್ಕೆ ಪ್ರತಿಫಲವಾಗಿ ಕೇಂದ್ರ ಸರಕಾರ ಅವರ ವಿರುದ್ದ ಸಿಬಿಐ ತನಿಖೆ ಕೈಬಿಡಲು ಅಂದಿನ ಕೇಂದ್ರ ಕಾನೂನು ಸಚಿವರಾಗಿದ್ದ ಭಾರದ್ವಾಜ್ ಸಹಕರಿಸಿದ್ದರು.
ಭಾರದ್ವಾಜ್ ಅಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಮತ್ತು ಇತರ ಆರು ಜನರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಚತುರ್ವೇದಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೂರನ್ನು ಸ್ವೀಕರಿಸಿರುವ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತ್ತಿದ್ದಾರೆಂದು ವರದಿಯಾಗಿದೆ. ಈ ಸಂಬಂಧ ರಾಜ್ಯಪಾಲ ಭಾರದ್ವಾಜ್ ಅವರಿಂದ ಯಾವ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.












Click it and Unblock the Notifications