ಡಿ. 6ಕ್ಕೆ ಯಡಿಯೂರಪ್ಪಗೆ ಮತ್ತೆ ರಾಜಯೋಗ: ಜ್ಯೋತಿಷಿ ಕಾಳಿಚರಣ್

bsy-to-get-raja-yoga-again-dec6-kalicharan-astrology
ಬೆಂಗಳೂರು‌, ಅ.18: ಈ ಸುದ್ದಿ ಸ್ವತಃ ಯಡಿಯೂರಪ್ಪ ಹಾಗೂ ಅವರ ಕಟ್ಟಾ ಬೆಂಬಲಿಗರಿಗೆ ಖಂಡಿತಾ ಸಂತೋಷತರುವಂತಹುದು. ಏನಪಾ ಅಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದೇ ಡಿಸೆಂಬರ್ 6ಕ್ಕೆ ಮತ್ತೆ ರಾಜಯೋಗ ಖುಲಾಯಿಸಲಿದೆ ಎಂದು ನಗರದ ಖ್ಯಾತ ಜ್ಯೋತಿಷಿ ಕಾಳಿಚರಣ್ ಅವರು ಹೇಳಿದ್ದಾರೆ.

ಕಾಳಿಚರಣ್ ಅವರ ಭವಿಷ್ಯವಾಣಿ ಹೀಗಿದೆ: ಸದ್ಯಕ್ಕೆ ಯಡಿಯೂರಪ್ಪ ಅವರಿಗೆ ಭೂಗತಯೋಗವಿದೆ. ಅಂದರೆ ಅವರ ಜಾತಕ ಮತ್ತು ಸಂಖ್ಯಾಶಾಸ್ತ್ರದ ಅನುಸಾರ ಹೇಳುವುದಾದರೆ ಅವರು ದೈನಂದಿನ ಚಟುವಟಿಕೆಗಳಿಂದ ದೂರವುಳಿದು, ಅಜ್ಞಾತರಾಗುತ್ತಾರೆ. ಅಂದರೆ ಅದೇ ಜೈಲುವಾಸ.

ಈ ಮಧ್ಯೆ, ಅಂಗಭಿನ್ನಕ್ಕೂ ಒಳಗಾಗುತ್ತಾರೆ. ಅಂದರೆ ಅನಾರೋಗ್ಯ ಕಾಡುತ್ತದೆ. ಅಂದರೆ ವೈದ್ಯ ವಿಜ್ಞಾನದ ಪ್ರಕಾರ ಜಯದೇವ ಆಸ್ಪತ್ರೆಯಲ್ಲಿ ಅವರ ಅಂಗ ಭಿನ್ನವಾಗುತ್ತದೆ. ಅಂದರೆ ಶಸ್ತ್ರಚಿಕಿತ್ಸೆಗೊಳಗಾಗುತ್ತಾರೆ.

ಮುಂದ!? ಡಿಸೆಂಬರ್ 6ಕ್ಕೆ ಸರಿಯಾಗಿ ಅವರ ಗ್ರಹಗತಿಗಳು ಸರಿಹೋಗಿ ಮತ್ತೆ ಅದೃಷ್ಟ ಖುಲಾಯಿಸಲಿದೆ. ಅಂದರೆ ಮತ್ತೆ ರಾಜ್ಯಕ್ಕಿಂತಲೂ ರಾಷ್ಟ್ರಮಟ್ಟದಲ್ಲಿ ರಾರಾಜಿಸಲಿದ್ದಾರೆ ಎಂದು ಕಾಳಿಚರಣ್ ಭವಿಷ್ಯ ನುಡಿದಿದ್ದಾರೆ.

ಈ ಮಧ್ಯೆ, ಕಟ್ಟಾಭಿಮಾನಿಗಳಿಗೆ ಮತ್ತು ಕೃಷ್ಣಯ್ಯ ಶೆಟ್ಟಿ ಅಭಿಮಾನಿಗಳಿಗೆ ಶಾನೆ ಬೇಸರದ ಸಂಗತಿಯೂ ಇದೆ. ಜ್ಯೋತಿಷಿ ಕಾಳಿಚರಣ್ ಪ್ರಕಾರ ಕಟ್ಟಾ ಸುಬ್ರಮಣ್ಯ, ಅವರ ಪುತ್ರ ಜಗದೀಶ ಹಾಗೂ ಮೊನ್ನೆ ತಾನೆ ಜೈಲಿಗೆ ಎಂಟ್ರಿ ಹಾಕಿರುವ ಕೃಷ್ಣಯ್ಯ ಶೆಟ್ಟಿ ಅವರುಗಳಿಗೆ ಜೈಲುವಾಸ ಕಾಯಂ ಆಗಲಿದೆ. ಜೈಲಿನಿಂದ ಹೊರಬಂದರೂ ಅವರಿಗೆ ರಾಜಯೋಗ ಮತ್ತೆ ಲಭ್ಯವಾಗುವುದಿಲ್ಲ. ಅವರಿನ್ನು ಅಷ್ಟೇ ಎಂದು ಕಾಳಿಚರಣ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+