ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ದಿಢೀರ್ ಆಸ್ಪತ್ರೆಗೆ: ನ್ಯಾಯಾಂಗ ತನಿಖೆಯಾಗಲಿ

By Srinath
|
Google Oneindia Kannada News

bsy-jail-hospital-pujari-demands-judicial-enquiry
ಮಂಗಳೂರು, ಅ.17: ಭ್ರಷ್ಟಾಚಾರ ಆರೋಪದಡಿ ಬಂಧಿತರಾಗಿ ಜೈಲುಹಕ್ಕಿಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನಾರೋಗ್ಯದ ನೆಪ ವೊಡ್ಡಿ ದಿಢೀರ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾದರ್ನ ಪೂಜಾರಿ ಆಗ್ರಹಿಸಿದ್ದಾರೆ.

ಯಡಿಯೂರಪ್ಪ ಜೈಲಿನಿಂದ ಆಸ್ಪತ್ರೆಗೆ ಸೇರಿರುವುದರ ಹಿಂದೆ ಸದಾನಂದ ಗೌಡ, ಜೈಲು ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ತಪಾಸಣೆ ನಡೆಸಿದ ವೈದ್ಯರ ಪಾತ್ರ ಏನು ಎಂಬುದು ಬೆಳಕಿಗೆ ಬರಲು ನ್ಯಾಯಾಂಗ ತನಿಖೆಯಾಗಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಅಕ್ರಮ ಎಸಗುವ ರಾಜಕಾರಣಿಗಳು ಜೈಲು ಸೇರುವುದು ಸಂಶಯವಾಗಿದೆ ಎಂದು ಪೂಜಾರಿ ಅಭಿಪ್ರಾಯಪಟ್ಟರು.

ಯಡ್ಡಿಯನ್ನು ಉಚ್ಛಾಟಿಸಿ: ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ರಥಯಾತ್ರೆ ಆರಂಭಿಸಿರುವ ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ಕರ್ನಾಟಕದಲ್ಲಿ ಆ ಯಾತ್ರೆ ಮುಂದುವರಿಸುವ ನೈತಿಕತೆ ಹೊಂದಿದ್ದಾರೆಯೇ? ತನ್ನ ಉದ್ದೇಶದ ಬಗ್ಗೆ ಅವರಿಗೆ ನೈಜ ಕಾಳಜಿಯಿದ್ದರೆ ರಥಯಾತ್ರೆಯನ್ನು ತಕ್ಷಣ ಕೈ ಬಿಡಲಿ ಮತ್ತು ಜೈಲು ಪಾಲಾಗಿರುವ ಯಡಿಯೂರಪ್ಪರನ್ನು ಪಕ್ಷದಿಂದಲೇ ಉಚ್ಛಾಟಿಸುವ ಧೈರ್ಯ ತೋರಲಿ ಎಂದು ಪೂಜಾರಿ ಸವಾಲು ಹಾಕಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಭಾನುವಾರ ಅವರು ಮಾತನಾಡಿದರು.

English summary
Former chief minister of Karnataka BS Yeddyurappa has all of a sudden developed chest pain and started vomitting in the night. As such jail authorities admitted him to Jayadeva Hospital at 2 am on Oct 16. But KPCC member, ex central minister Janardhana Pujari has demanded judicial enquiry into the episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X