ಆಣೆ ತಪ್ಪಿದ ಯಡ್ಡಿ ಮೇಲೆ ಧರ್ಮಸ್ಥಳದ ಮಂಜುನಾಥ ಮುನಿದನೇ?

ಜೂನ್ 27ರಂದು ಏನಾಗಿತ್ತೆಂದರೆ ಯಾವುದೋ ಆರೋಪದ ಸಂಬಂಧ ಇದೇ ಯಡಿಯೂರಪ್ಪ 'ಧರ್ಮಸ್ಥಳದಲ್ಲಿ ಪ್ರಮಾಣ ಮಾಡೋಣ ಬನ್ನಿ' ಎಂದು ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ್ದರು.
ಇದಕ್ಕೆ ಸನ್ಮಾನ್ಯ ಕುಮಾರಣ್ಣ 'ನಾನ್ ರೆಡಿ' ಅಂದೇ ಬಿಟ್ಟರು. ಆಗ ಯಡಿಯೂರಪ್ಪ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿಕೊಂಡರು. ಮುಂದೆ, ಇಬ್ಬರೂ ನಿಗದಿತ ದಿನದಂದು ಧರ್ಮಸ್ಥಳಕ್ಕೆ ಬಂದರಾದರೂ ಮಂಜುನಾಥನ ಎದುರು ಒಟ್ಟಿಗೆ ಆಣೆ ಮಾಡಲಿಲ್ಲ.
ಕುಮಾರಸ್ವಾಮಿ ಅವರೇನೋ 'ನಾನು ಮಂಜುನಾಥನ ಎದುರು ಪ್ರಮಾಣ ಮಾಡಿದೆ' ಎಂದು ಸ್ವಗತದಲ್ಲಿ ಹೇಳಿಕೊಂಡರು. ಆದರೆ ಯಡಿಯೂರಪ್ಪನವರು ಸುಮ್ನೆ ದೇವರ ದರ್ಶನ ಮಾಡಿ, ಹೊರಟೇ ಬಿಟ್ಟರು.
ಅದಾಗಿ ಸುಮಾರು ನಾಲ್ಕು ತಿಂಗಳೇ ಕಳೆದಿದೆ ಈಗ 'ಮಾತು ತಪ್ಪಿದ ಯಡಿಯೂರಪ್ಪ' ದೇವರ ಮುನಿಸಿಗೆ ಪಾತ್ರರಾದರೇ ಎಂದು ಪರಪ್ಪನ ಆಗ್ರಹಾರ ಜೈಲಿನ ಗೋಡೆಗಳು ಮಾತನಾಡಿಕೊಳ್ಳುತ್ತಿವೆ. 'ಮಾತು ಬಿಡ ಮಂಜುನಾಥ' ಎಂಬ ಹೆಸರು ಧರ್ಮಸ್ಥಳದ ದೇವರಿಗಿದೆ.











Click it and Unblock the Notifications