ಪೃಥ್ವಿ ಆತ್ಮಹತ್ಯೆ: ಪೊಲೀಸರು ಉತ್ತರಿಸಬೇಕಾದ ಪ್ರಶ್ನೆಗಳು

sports-athlete-prithvi-suicide-police-yet-to-answer
ಬ್ರಹ್ಮಾವರ, ಅ. 12: ಪೃಥ್ವಿ ಸಾವಿನ ಕುರಿತ ಹಲವು ಪ್ರಶ್ನೆಗಳು ಇನ್ನೂ ನಿಗೂಢವಾಗಿವೆ. ಅವುಗಳಿಗೆ ಉತ್ತರವನ್ನು ತನಿಖೆಯಿಂದಲೇ ತಿಳಿಯಬೇಕಾಗಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್‌. ಪೂಜಾರಿ ಆಗ್ರಹಿಸಿದ್ದಾರೆ.

1. ಮನೆಗೆ ಬರುತ್ತೇನೆಂದು ಹೇಳಿದ ಪೃಥ್ವಿ ಅರ್ಧ ಗಂಟೆಯ ಅಂತರದಲ್ಲಿ ನೇಣಿಗೆ ಶರಣಾದುದನ್ನು ಮೊದಲು ನೋಡಿದವರು ಯಾರು?
2. ಬಾಗಿಲು ಒಡೆದಿದೆ ಎಂದು ಕೆಲವರು ಹೇಳಿದರೆ ಅಡುಗೆಯವರು ನೋಡುವಾಗ ಬಾಗಿಲು ತೆರೆದಿದೆ ಎನ್ನುವುದಕ್ಕೆ ಸ್ಫಷ್ಟತೆಯಿಲ್ಲ.
3. ಆತ್ಮಹತ್ಯೆಯ ಬಗ್ಗೆ ಪೊಲೀಸರಿಗೆ ತಿಳಿಸದೆ ನೇರ ಆಸ್ಪತ್ರೆಗೆ ತಂದುದರ ಔಚಿತ್ಯವಾದರೂ ಏನು?
4. ಮಂಡ್ಯದಲ್ಲಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಬಸ್ಸಿನಲ್ಲಿ ನೃತ್ಯ ಮಾಡುತ್ತ ಸಹಪಾಠಿಗಳಿಗೆ ಸಿಹಿತಿಂಡಿ ವಿತರಿಸಿದ ಈಕೆ ಮನೆಯಲ್ಲಿದ್ದ ತಾಯಿ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ; ಇದರಿಂದ ಆತ್ಮಹತ್ಯೆ ಪೂರ್ವ ನಿರ್ಧರಿತವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
5. ಪೃಥ್ವಿ ಆತ್ಮಹತ್ಯೆಯ ಕುರಿತು ಆಕೆಯ ತಂದೆಗೆ ಕರೆ ಮಾಡಿದ ಮೊಬೈಲ್‌ ಯಾರಿಗೆ ಸೇರಿದ್ದು ಎಂದು ತಿಳಿದಿಲ್ಲ. ಮತ್ತೆ ಆ ಸಂಖ್ಯೆಗೆ ಕರೆ ಮಾಡಿದರೆ ದರ್ಪದ ಮಾತುಗಳು ಉತ್ತರವಾಗಿದ್ದವು.
6. ದೈವ ಭಕ್ತೆಯಾದ ಪೃಥ್ವಿಯ ಕುತ್ತಿಗೆಯಲ್ಲಿ ಶಿಲುಬೆ ಬಂದದ್ದು ಹೇಗೆ?
7. ಪೃಥ್ವಿಯ ಡೈರಿಯಲ್ಲಿ ಪತ್ತೆಯಾದ 'ಯಾವ ಪಾಲಕರೂ ಸಹ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಹಾಕಬಾರದು. ಚಿತ್ರಹಿಂಸೆ ನೀಡುತ್ತಾರೆ' ವಾಕ್ಯ ಆಕೆಗೆ ಅಲ್ಲಿ ಉಸಿರು ಕಟ್ಟಿಸುವ ವಾತಾವರಣ ನಿರ್ಮಿಸಿತ್ತೆ? ಡೈರಿಯಲ್ಲಿ ಎಲ್ಲಾ ಪುಟಗಳಿದ್ದು ಮಹತ್ವದ 4 ಹಾಳೆಗಳನ್ನು ಹರಿದಿರಲು ಕಾರಣವೇನು? ಆ ಹಾಳೆಗಳು ಎಲ್ಲಿ ಹೋದವು?
8. ಆಕೆಯ ಬಳಿ ಮೊಬೈಲ್‌ ಇತ್ತು ಎನ್ನುವುದಾದಾದರೆ ಅದರಿಂದ ಸಂಪೂರ್ಣ ವಿವರಗಳನ್ನು ಪಡೆಯಲು ಸಾಧ್ಯವಿಲ್ಲವೆ? ಬರೀ ಪ್ರಶ್ನೆಗಳೇ .... ಉತ್ತರಿಸಬೇಕಾದ ಪೊಲೀಸರು ತೂಕಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+