ಅಥ್ಲೀಟ್ ಪೃಥ್ವಿ ಸಾಯುವ ಮುನ್ನ ಮತಾಂತರಗೊಂಡಿದ್ದಳೇ!?

athlete-prithvi-converted-to-christianity
ಬ್ರಹ್ಮಾವರ, ಅ. 12: ಕುಂದಾಪುರ ತಾಲೂಕಿನ ಎಸ್. ಪಿ. ಪೃಥ್ವಿ ಅಂಪಾರು ಆತ್ಮಹತ್ಯೆ ಪ್ರಕರಣ ದಿನೇ ದಿನೆ ಗೋಜಲುಗೋಜಲಾಗುತ್ತಿದೆ. ಪೃಥ್ವಿ, ಸೆಪ್ಟೆಂಬರ್ 27ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಳು ಎಂಬುದು ಬೆಳಕಿಗೆ ಬಂದಿದೆ. ಏಕೆಂದರೆ ಪೃಥ್ವಿ ದೇಹದ ಮೇಲೆ ಕುತ್ತಿಗೆಯಲ್ಲಿ ಶಿಲುಬೆ ಇತ್ತು!

ಈ ಮಧ್ಯೆ, ಪೃಥ್ವಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬಳಿಕ ಕ್ರೀಡಾ ಕ್ಲಬ್‌ಗಳು ತಮ್ಮ ಸಂಸ್ಥೆಗೆ ಸೇರಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದವೇ ಹೊರತು ಆಕೆಯ ಸಾವಿನ ಬಳಿಕ ಕನಿಷ್ಠ ಮನೆಗೆ ತೆರಳಿ ಹೆತ್ತವರಿಗೆ ಸಾಂತ್ವನ ಹೇಳುವ ಪ್ರಯತ್ನವನ್ನೂ ಈ ತನಕ ಮಾಡಿಲ್ಲ ಎನ್ನಲಾಗಿದೆ.

50ಕ್ಕೂ ಅಧಿಕ ಚಿನ್ನದ ಪದಕ, ನೂರಾರು ಪ್ರಶಸ್ತಿ ಪಡೆದಿರುವ ಪೃಥ್ವಿಯ ಶವವನ್ನು ದಹನ ಮಾಡುವ ಮುಂಚೆಯೇ ಕೆಲವು ಸಂಘ-ಸಂಸ್ಥೆಗಳು ಪತ್ರಿಕಾಗೋಷ್ಠಿ ನಡೆಸಿ ಆಕೆಯ ಸಾವಿನ ವಸ್ತುನಿಷ್ಠ ತನಿಖೆಗೆ ಆಗ್ರಹಿಸುವ ಮೂಲಕ ಗುರುತಿಸಿಕೊಂಡಿದ್ದವು. ಆದರೆ ಇವರ ಕುಟುಂಬದ ವಾಸ್ತವ ಪರಿಸ್ಥಿತಿಯ ಬಗ್ಗೆ ಗಮನಹರಿಸುವ ಗೋಜಿಗೆ ಹೋಗಿಲ್ಲ.

ಇದೇ ವೇಳೆ ಪೃಥ್ವಿ ಹೆತ್ತವರು ಆಕೆಯ ಸಾವಿನ ಬಗ್ಗೆ ಅನೇಕ ಆನುಮಾನಗಳನ್ನು ಹೊಂದಿದ್ದಾರೆ. 62 ಕೆ.ಜಿ. ಭಾರದ ವ್ಯಕ್ತಿ ನೇಣು ಬಿಗಿದುಕೊಂಡಾಗ ನೇಣು ಕುಣಿಕೆಯ ಬಟ್ಟೆಯನ್ನು ಕತ್ತರಿಸಬೇಕೇ ವಿನಹ ಹಾಗೆಯೇ ಗಂಟು ಬಿಚ್ಚಲು ಸಾಧ್ಯವಿಲ್ಲ. ಇನ್ನು, ನೇಣು ಬಿಗಿದುಕೊಂಡ ಫ್ಯಾನಿಗೂ ಸಹ ಯಾವುದೇ ರೀತಿ ಹಾನಿಯಾಗಿಲ್ಲ.

ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. ಮಗಳ ಸಾವಿನ ನ್ಯಾಯಕ್ಕಾಗಿ ಉಸಿರಿರುವ ತನಕ ಹೋರಾಡುತ್ತೇನೆ ಎನ್ನುತ್ತಾರೆ ಪೃಥ್ವಿ ಅಪ್ಪ-ಅಮ್ಮ. ಅಥ್ಲೀಟ್ ಪೃಥ್ವಿ ಆತ್ಮಹತ್ಯೆ ಕುರಿತು ಪೊಲೀಸರು ಉತ್ತರಿಸಬೇಕಾದ ಪ್ರಶ್ನೆಗಳು ಯಾವುವು ಗೊತ್ತಾ? ಮುಂದೆ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+