ಉಚಿತ ರೋಮಿಂಗ್ ಸೇವೆ, ಯುಪಿಎ ಕೊಡುಗೆ?

ಹೊಸ ದೂರಸಂಪರ್ಕ ನೀತಿ-2011 ಯನ್ನು ಪ್ರಕಟಿಸಿದ ಟೆಲಿಕಾಂ ಸಚಿವ ಕಪಿಲ್ ಸಿಬಲ್, ದೇಶವ್ಯಾಪಿ 'ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಇದರಿಂದ ಎಸ್ ಟಿಡಿ ಕರೆಗಳ ಅಂತರ ಕಡಿಮೆಯಾಗಲಿದೆ ಎಂದಿದ್ದಾರೆ.
ಬ್ರಾಡ್‌ಬ್ಯಾಂಡ್ ಸೇವೆಗೆ ಬದ್ಧ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಪಡೆಯಬಹುದು.
ಸಂಪರ್ಕ ಸಾಧನವಾಗಿರುವ ಮೊಬೈಲ್ ಅನ್ನು ಸಂವಹನ, ಗುರುತಿನ ದಾಖಲೆ, ಸಂಪೂರ್ಣ ಸುರಕ್ಷತೆಯ ಹಣಕಾಸು ಸೇವೆ, ಬಹುಭಾಷೆಗಳಲ್ಲಿ ಸೇವೆ ಮತ್ತಿತರ ವಹಿವಾಟು ನಡೆಸಲು ಸಾಧ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.












Click it and Unblock the Notifications