ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲುಗೆ ಮತ್ತೆ ಸಚಿವರಾಗುವ ಭಾಗ್ಯ ಬೇಡ: ಬಿ ವಿ ಆಚಾರ್ಯ

By Srinath
|
Google Oneindia Kannada News

sriramulu-cabinet-berth-ag-acharya-red-signal
ಬೆಂಗಳೂರು, ಅ.11: ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತೆ ಸಚಿವರಾಗುವ ಆಸೆ ಭಗ್ ಅಂತ ಭಗ್ನಗೊಂಡಿದೆ. 'ಶ್ರೀರಾಮುಲುಗೆ ಮತ್ತೆ ಮಂತ್ರಿ ಪದವಿ ನೀಡುವುದು ಕಾನೂನಿನ ನೆಲೆಯ ಸೂಕ್ರವಲ್ಲ' ಎಂದು ರಾಜ್ಯದ ಅಡ್ವೊಕೇಟ್ ಜನರಲ್ ಬಿ ವಿ ಆಚಾರ್ಯ ಷರಾ ಬರೆದಿರುವುದೇ ಇದಕ್ಕೆ ಹೇತುವಾಗಿದೆ.

ಕಳೆದ ವಾರ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಆದಿಯಾಗಿ ಬಳ್ಳಾರಿ ಭಾಗದಿಂದ ಶ್ರೀರಾಮುಲುಗೆ ಮತ್ತೆ ಅಚಿವ ಸ್ಥಾನ ನೀಡಬೇಕು ಎಂದು ಭಾರಿ ಒತ್ತಡ ಬರುತ್ತಿದ್ದಂತೆಯೇ ಸಿಎಂ ಸದಾನಂದ ಗೌಡರು ಆಚಾರ್ಯರ ಸಲಹೆ ಕೇಳಿದ್ದಾರೆ. ಅದಕ್ಕೆ ಅವರು ಕಾನೂನು ಸಲಹೆ ನೀಡಿದ್ದು ಸುತರಾಂ ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

ಶ್ರೀರಾಮುಲು ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಸರಕಾರ ಇಕ್ಕಟ್ಟಿಗೆ ಸಿಲುಕುತ್ತದೆ. ಲೋಕಾಯುಕ್ತ ವರದಿಯನ್ನು ನೇರವಾಗಿ ತಿರಸ್ಕರಿಸಲಾಗಿದೆ ಎಂಬ ಭಾವನೆ ಮೂಡುತ್ತದೆ. ಅಲ್ಲದೆ, ಶ್ರೀರಾಮುಲು ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಲೋಕಾಯುಕ್ತ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದ್ದರಿಂದ ಈಗ ಶ್ರೀರಾಮುಲುಗೆ ಅವಕಾಶ ಮಾಡಿಕೊಡುವುದು ಸಮಂಜಸವಲ್ಲ ಎಂದೂ ಆಚಾರ್ಯ ನುಡಿದಿರುವುದಾಗಿ ತಿಳಿದುಬಂದಿದೆ.

English summary
The advocate general (AG) of the state B V Acharya has showed red signal for cabinet berth tainted ex Minister B Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X