ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾ ಬಳಿ ಗದ್ದೆಗೆ ಬಸ್ ಉರುಳಿ 7 ಜನರ ದುರ್ಮರಣ

By Prasad
|
Google Oneindia Kannada News

Accident claims 7 near Kumata
ಕುಮಟಾ, ಅ. 11 : ಧರ್ಮಸ್ಥಳದಿಂದ ಬಾಗಲಕೋಟಕ್ಕೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಸೇತುವೆ ಮೇಲಿಂದ ಉರುಳಿಬಿದ್ದ ಪರಿಣಾಮ ಒಂದು ವರ್ಷದ ಮಗು ಸೇರಿದಂತೆ 7 ಜನ ಸಾವಿಗೀಡಾಗಿ 40 ಜನ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ದೇವಗಿ ಎಂಬಲ್ಲಿ ಸೋಮವಾರ ರಾತ್ರಿ ಜರುಗಿದೆ.

ರಾತ್ರಿ ಭಾರೀ ಮಳೆ ಸುರಿಯುತ್ತಿದ್ದಂಥ ಸಮಯದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ರಸ್ತೆಬದಿಯ ಭತ್ತದ ಗದ್ದೆಗೆ ಬಸ್ ಉರುಳಿದೆ. ಆರು ಜನ ಸ್ಥಳದಲ್ಲಿಯೇ ಮೃತರಾದರೆ, ಒಂದು ವರ್ಷದ ಮಗು ಆಸ್ಪತ್ರೆಯಲ್ಲಿ ಅಸುನೀಗಿದೆ. ಗಾಯಗೊಂಡವರನ್ನು ಕುಮಟಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತ್ತವರನ್ನು ಬಸ್ ನಿರ್ವಾಹಕ ರಾಮಪ್ರಸಾದ ತಲ್ವಾರ್ (37), ರಸೂಲ್ ಅಲಿ ಖಾನ್ (27), ಅಶೋಕ್ ರೇವಣಕರ್ (49), ಶೋಭಾ ಶಾಸ್ತ್ರಿ (47), ಮೃತ್ಯುಂಜಯ (35), ನಾಗರಾಜ ನಾಯಕ್ (45) ಮತ್ತು ನಾಗರಾಜ ಅವರ ಮಗಳು ರಕ್ಷಿತಾ ಎಂದು ಗುರುತಿಸಲಾಗಿದೆ. ಸೋಮವಾರವೆ ಆಂಧ್ರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯಾದಗಿರಿಯ 7 ಜನ ಅಸುನೀಗಿದ್ದರು.

English summary
Seven people including a toddler killed and more than 40 injured as KSRTC bus overturns from the bridge into the paddy field at Devagi near Kumata in Uttara Kannada district. The bus was going from Dharmasthala to Bagalkot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X