ಪ್ರಧಾನಿ ಸಿಂಗ್ ತೀರ್ಥಯಾತ್ರೆಗೆ ಹೋಗಲಿ: ನಿತಿನ್ ಗಡ್ಕರಿ

manmohan-singh-go-on-pilgrimage-gadkari
ಡೆಹ್ರಾಡೂನ್, ಅ. 10: ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಸಹಾಯಕರಾದರೆ ಅವರು ತೀರ್ಥಯಾತ್ರೆಗೆ ಹೊರಡುವುದು ಒಳಿತು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಅವರು ತಮ್ಮ ಹುದ್ದೆಯನ್ನು ತೊರೆದು ತೀರ್ಥಯಾತ್ರೆಗೆ ಹೋಗಲು ಇದು ಸಕಾಲ ಎಂದು ಇಂದು ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಗಡ್ಕರಿ ನುಡಿದರು.

ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಚುನಾವಣಾ ಪ್ರಚಾರವನ್ನು ಆರಂಭಿಸಲು ಈ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. 'ಅಷ್ಟೊಂದು ಅಸಹಾಯಕರಾದರೆ ಮನಮೋಹನ್ ಜಿ, ನೀವು ವಿಶ್ರಾಂತಿ ತೆಗೆದುಕೊಳ್ಳಲೇ ಬೇಕು. ನೀವು ಒಂದೋ ಬದರಿನಾಥ್ ಮತ್ತು ಕೇದಾರಕ್ಕೆ ಹೋಗಿ ಅಥವಾ ಸ್ವರ್ಣಮಂದಿರಕ್ಕೆ ಹೋಗಿ' ಎಂದು ಗಡ್ಕರಿ ನುಡಿದರು.

2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವುದು ತಾನೊಬ್ಬ ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಹಲವರು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಟೆಲಿಕಾಂ ಸಚಿವ ಎ. ರಾಜಾ ಪದೇ ಪದೆ ಹೇಳುತ್ತಿದ್ದಾರೆ. ಈ ಮಧ್ಯೆ, ಮತ್ತೊಂದು ಕಂತು ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ನಾಳೆ ಸಲ್ಲಿಸುವುದಾಗಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ತನಗೆ ಹೇಳಿದ್ದಾರೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+