ತೇಜಸ್ವಿನಿ ಉಚ್ಚಾಟನೆಗೆ ಕಾಂಗ್ರೆಸ್ಸಿಗರ ಸಿದ್ಧತೆ

ಬ್ಲಾಕ್ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲೂ ತೇಜಸ್ವಿನಿ ಉಚ್ಚಾಟನೆ ವಿಷಯವೇ ಪ್ರಮುಖವಾಗಿ ಚರ್ಚೆಯಾಗಿದೆ. ಡಿಕೆ ಶಿವಕುಮಾರ್ ಹಾಗೂ ತೇಜಸ್ವಿನಿ ನಡುವಿನ ಶೀತಲ ಸಮರ ಈಗ ತಾರಕಕ್ಕೇರಿದೆ.
ಇತ್ತೀಚೆಗೆ ಮಾಜಿ ಶಾಸಕ ಸಿ.ಎಂ ಲಿಂಗಪ್ಪ ಅವರೊಂದಿಗೆ ಕೂಡಾ ತೇಜಸ್ವಿನಿ ಕಿತ್ತಾಟ ನಡೆಸಿದ್ದರು. ತೇಜಸ್ವಿನಿ ಉಚ್ಚಾಟನೆಗೆ ಜಿಲ್ಲಾ ಕಾಂಗ್ರೆಸ್ ಶಿಫಾರಸ್ಸು ಮಾಡಿದ್ದರೂ ಕೆಪಿಸಿಸಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಈಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕೈಲಿ ತೇಜಸ್ವಿನಿ ಅವರ ಭವಿಷ್ಯ ಅಡಗಿದೆ. ತೇಜಸ್ವಿನಿ ಉಚ್ಚಾಟನೆಯಾಗದಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ಸಾಮೂಹಿಕ ನೀಡಲು ನಿರ್ಧರಿಸಿದ್ದಾರೆ.












Click it and Unblock the Notifications