ನಾಗೇಂದ್ರ ಗನ್ ಮ್ಯಾನ್ ಶಾಂತಮೂರ್ತಿ ಅಮಾನತು

ಅಮಾತನಾದ ಡಿಎಆರ್ ಪೇದೆ ಶಾಂತಮೂರ್ತಿ. ಇವರು ಕರ್ತವ್ಯದ ಸಮಯದಲ್ಲಿ ಗನ್ ಅನ್ನು ಬಿ. ನಾಗೇಂದ್ರ ಅವರ ಮನೆಯ ಗೂಡಲ್ಲಿ ಇರಿಸಿ ಎಲ್ಲಿಗೋ ಹೋಗಿದ್ದರು. ಸೋಮವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿಬಿಐ ಗನ್ ಅನ್ನು ವಶಕ್ಕೆ ತೆಗೆದುಕೊಂಡು, ಗಾಂಧಿನಗರ ಪೊಲೀಸ್ ಠಾಣೆಗೆ ಒಪ್ಪಿಸಿತ್ತು.
ಈ ಕುರಿತು ಪೇದೆ ಶಾಂತಮೂರ್ತಿ ಸೋಮವಾರ ಸಂಜೆಯೇ ಹಿರಿಯ ಅಧಿಕಾರಿ ಸಮ್ಮುಖದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಡ್ಯೂಟಿ ಮುಗಿದ ಕೂಡಲೇ ಬುಲೆಟ್‌ಗಳ ಸಮೇತ ಸಂಬಂಧಿಸಿದ ಹಿರಿಯ ಅಧಿಕಾರಿಗೆ ಒಪ್ಪಿಸಬೇಕು, ಬೆಳಗ್ಗೆ ಪುನಃ ಪಡೆಯಬೇಕು ಎನ್ನುವ ಸರ್ಕಾರಿ ನಿಯಮವಿದೆ.
ಈ ಆದೇಶವನ್ನು ಉಲ್ಲಂಘಿಸುವ ಮೂಲಕ ಕರ್ತವ್ಯಲೋಪ ಎಸಗಿದ್ದ ಶಾಂತಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಆದೇಶ ಜಾರಿ ಮಾಡಿದ್ದಾರೆ.












Click it and Unblock the Notifications