ಭೀಕರ ಅಪಘಾತ : ಸಕ್ಕರೆ ತುಂಬಿದ್ದ ಲಾರಿ, ಚಾಲಕ ಭಸ್ಮ
ಯಾದಗಿರಿ,
ಅ. 3 : ನಿಂತಿದ್ದ ಲಾರಿಗೆ ಹಿಂಬಂದಿಯಿಂದ ಸಕ್ಕರೆ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಕ್ಕರೆ ತುಂಬಿದ್ದ ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಯಾದಗಿರಿಯಿಂದ 2 ಕಿ.ಮೀ ದೂರದಲ್ಲಿನ ವಡಗೇರಾ ಕ್ರಾಸ್ ಬಳಿ ನಡೆದಿದೆ. id="toptextpromo">ಲಾರಿಯಲ್ಲಿದ್ದ
ವ್ಯಕ್ತಿ ಗುರುತಿಸಲಾಗದಷ್ಟು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾನೆ. ಡಿಕ್ಕಿ ಹೊಡೆದ ಲಾರಿ 16 ಕ್ವಿಂಟಾಲ್ ಸಕ್ಕರೆ ತುಂಬಿಕೊಂಡು ಆಂಧ್ರಪ್ರದೇಶದ ತಾಂಡೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಗೊಬ್ಬರ ತುಂಬಿದ ಇನ್ನೊಂದು ಲಾರಿ (CTW-6276) ಯಾದಗಿರಿ ಮೂಲದ ಖುರ್ಷಿದ್ ಎನ್ನುವವರಿಗೆ ಸೇರಿದೆ. id='are-slot-1' class='oiad oi-axt oiadv'> id='top-searched-articles'>ಘಟನೆ
ನಡೆದ ಕೂಡಲೇ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇದುವರೆಗೂ ಯಾವೊಬ್ಬ ಲಾರಿ ಮಾಲಿಕರು ಆಗಮಿಸದಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications