ರೆಡ್ಡಿ ಆಪ್ತ ಶಾಸಕ ನಾಗೇಂದ್ರ ಮೇಲೆ ಸಿಬಿಐ ದಾಳಿ

ಸೆಪ್ಟಂಬರ್ 5ರಂದು ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಮತ್ತು ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಿದ ನಂತರ ಸಿಬಿಐ ನಡೆಸುತ್ತಿರುವ 2ನೇ ದೊಡ್ಡ ದಾಳಿ ಇದು.
ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್ (ಎಎಂಸಿ = ಡಿಎಂಎಸ್) ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಗಣಿಗಳ ವ್ಯವಹಾರವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದ ಮೇಲೆ ಈ ದಾಳಿ ನಡೆದಿದೆ.
ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ರಾಜೇಂದ್ರ ಜೈನ್ ಅವರ ಕಚೇರಿ ಮತ್ತು ಮನೆ, ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರ ಈಗಲ್ ಲಾಜೆಸ್ಟಿಕ್ಸ್‌ನ ವ್ಯವಹಾರ ನಡೆಸುತ್ತಿದ್ದ ಅವರ ಮನೆ, ಕಂಪ್ಲಿ ಶಾಸಕ ಟಿ.ಎಚ್. ಸುರೇಶಬಾಬು, ಎಎಂಸಿಯ ಮೂಲ ಮಾಲೀಕರಾದ ಕೆ.ಎಂ. ಪಾರ್ವತಮ್ಮ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಸಿಬಿಐ ತಂಡಕ್ಕೆ ಸ್ಥಳೀಯ ಪೊಲೀಸರು ಅಗತ್ಯ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಸೋಮವಾರ ನಸುಕಿನ 6 ಗಂಟೆಯಿಂದ ದಾಳಿ ಪ್ರಾರಂಭವಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ












Click it and Unblock the Notifications