ವ್ಯಂಗ್ಯಚಿತ್ರಕಾರರೇ ಹುಷಾರು! ನರೇಂದ್ರ ಮೋದಿ ಚಿತ್ರ ಬಿಡಿಸಬೇಡಿ
ಇಂದೋರ್,
ಅ.02: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ವ್ಯಂಗ್ಯಚಿತ್ರ ಬರೆದ ಹಿಂದಿ ಸಂಜೆ ಪತ್ರಿಕೆಯೊಂದರ ವ್ಯಂಗ್ಯ ಚಿತ್ರಕಾರರೊಬ್ಬರು ಇದೀಗ ಬಿಜೆಪಿ ಆಡಳಿತವಿರುವ ಇನ್ನೊಂದು ರಾಜ್ಯ ಮಧ್ಯಪ್ರದೇಶದಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಇದೆಂಥಾ ವ್ಯಂಗ್ಯ ಮೋದಿಜೀ!? id="toptextpromo">ಇಂದೋರ್
ಮೂಲದ 'ಪ್ರಭಾತ್ ಕಿರಣ್' ಸಂಜೆ ಪತ್ರಿಕೆಯಲ್ಲಿ ಗುಜರಾತ್ ಮುಖ್ಯಮಂತ್ರಿಯ ವ್ಯಂಗ್ಯಚಿತ್ರ ಬರೆದಿರುವ ಹರೀಶ್ ಯಾದವ್ ಎಂಬವರು ಇದೀಗ ತಾನು ಮಾಡಿರುವ 'ಅಪರಾಧ"ಕ್ಕಾಗಿ ಜೈಲು ಸೇರಿದ್ದಾರೆ ಎಂದು ವರದಿಯಾಗಿದೆ. id='are-slot-1' class='oiad oi-axt oiadv'> id='top-searched-articles'>ಹರೀಶ್
ಯಾದವ್ (39) ಅವರನ್ನು ಭಾರತೀಯ ದಂಡ ಸಂಹಿತೆಯ ಕಲಂ 295-ಎ ಪ್ರಕಾರ ಬಂಧಿಸಲಾಗಿದೆ. ಸೆ. 20ರಂದು ಪ್ರಕಟಿಸಲ್ಪಟ್ಟಿರುವ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿ ಉದ್ದೇಶ ಪೂರ್ವಕವಾದ ತೇಜೋವಧೆ, ಯಾವುದೇ ಒಂದು ಧಾರ್ಮಿಕ ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಯತ್ನಿಸಿದ ಆರೋಪವನ್ನು ವ್ಯಂಗ್ಯಚಿತ್ರಕಾರ ಹರೀಶ್ ಯಾದವ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ದಾಖಲಿಸಿಕೊಂಡಿದ್ದಾರೆ.











Click it and Unblock the Notifications