ವಿಧಾನಸೌಧದಲ್ಲಿ ಸೋಮಣ್ಣನ ಕಪಾಳಕ್ಕೆ ಚಪ್ಪಲಿ ಏಟು

ಹಲ್ಲೆ ಮಾಡಿದಾತನನ್ನು ಎಬಿವಿಪಿ ಕಾರ್ಯಕರ್ತ ಪ್ರಸಾದ್ ಎಂದು ಗುರುತಿಸಲಾಗಿದೆ. ಬಿಜೆಪಿ ಆಳ್ವಿಕೆಯಿಂದ ಬೇಸತ್ತು ಸೋಮಣ್ಣನವರ ಮೇಲೆ ಹಲ್ಲೆ ಮಾಡಿದ್ದೇನೆಂದು ಆತ ಹೇಳಿಕೆ ನೀಡಿದ್ದಾನೆ. ಸೋಮಣ್ಣ ಮಾತ್ರವಲ್ಲ, ಬಿಜೆಪಿಯ ಯಾರ ಮೇಲೆಯಾದರೂ ಇದೇ ರೀತಿ ಹಲ್ಲೆ ಮಾಡುವುದಾಗಿ ಆತ ಹೇಳಿದ್ದಾನೆ.
ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ತಮ್ಮ ಕಚೇರಿಯಿಂದ ಹೊರಬರುತ್ತಿದ್ದರು. ಆಗ ಹೊರಗೆ ಕಾದುಕುಳಿತಿದ್ದ ಪ್ರಸಾದ್ ಬಲಗಾಲಿನ ಚಪ್ಪಲಿ ತೆಗೆದುಕೊಂಡು ಕಪಾಳಕ್ಕೆ ಏಟು ಹಾಕಲು ಶುರುಮಾಡಿದ್ದಾನೆ. ಆಘಾತಗೊಂಡ ಸೋಮಣ್ಣ ಯಾಕೆ ಹೊಡಿಯುತ್ತಿದ್ದಿ ಎಂದು ಕೇಳಿದ್ದಾರೆ.
ಹಲ್ಲೆ ಮಾಡಿದ ನಂತರ ಸೋಮಣ್ಣನವರ ಬೆಂಬಲಿಗರು ಮತ್ತು ಅಧಿಕಾರಿಗಳು ಮನಸೋಇಚ್ಛೆ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ. ಪ್ರಸಾದ್ ಕುಡಿದಿದ್ದ ಮತ್ತು ಆತನ ಬಳಿ ಚಾಕುವೊಂದು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications