ರೇಣುಕಾಚಾರ್ಯ ಐಫೋನ್ ಲಪಟಾಯಿಸಿದ 'ಬೆಂಬಲಿಗ'
ಬೆಂಗಳೂರು,
ಸೆ. 30 : ಕೊಪ್ಪಳ ಉಪ ಚುನಾವಣೆಯಲ್ಲಿ ಸಂಗಣ್ಣ ಕರಡಿ ಗೆಲುವಿಗೆ ಬೇರೆ ಯಾರೂ ಅಲ್ಲ ಯಡಿಯೂರಪ್ಪನವರೇ ಕಾರಣ ಎಂದು ಕಂದಾಯ ಸಚಿವ ರೇಣುಕಾಚಾರ್ಯ ಘಂಟಾಘೋಷವಾಗಿ ಸಾರುತ್ತಿದ್ದರು. ಅವರು ಸುತ್ತಲೂ ನೆರೆದಿದ್ದ 'ಬೆಂಬಲಿಗ'ರೆಲ್ಲರೂ ತೊಂಬತ್ತು ಕೆಜಿ ತೂಕದ ರೇಣುಕಾಚಾರ್ಯರನ್ನು ಹೊತ್ತು ನಲಿದಾಡಿಸಿಬಿಟ್ಟರು. id="toptextpromo">ಆದರೆ,
ಆ ಸಂತಸದ ಘಳಿಗೆ ಜಾಸ್ತಿಹೊತ್ತು ಇರಲಿಲ್ಲ. ಯಾಕೆಂದರೆ, ರೇಸ್ ಕೋರ್ಸ್ ರಸ್ತೆಯ ಮುಖ್ಯಮಂತ್ರಿಯ ನಿವಾಸದೆದಿರು ಆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅವರ ಜೇಬಲ್ಲಿದ್ದ ದುಬಾರಿ ಐಫೋನನ್ನು ಬೆಂಬಲಿಗರಲ್ಲೊಬ್ಬ ಕೈಚಳಕ ತೋರಿಸಿ ಲಪಟಾಯಿಸಿಬಿಟ್ಟಿದ್ದಾನೆ. ಬಾಯಲ್ಲಿ ಸ್ವೀಟು ಬಿದ್ದಿತ್ತು, ಕಿಸೆಯಿಂದ ಐಫೋನು ಜಾರಿತ್ತು. id='are-slot-1' class='oiad oi-axt oiadv'> id='top-searched-articles'>ಇದರ
ಬಗ್ಗೆ ಅವರಿಗೆ ತಿಳಿದೇ ಇರಲಿಲ್ಲ. ಕರಡಿ ಗೆದ್ದಿದ್ದಕ್ಕಾಗಿ ರೇಣುಕಾಚಾರ್ಯರಿಗೆ ಶುಭಾಶಯ ಕೋರಲು ಅನೇಕರು ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು ತಿಳಿದುಬಂದಿದೆ. ಆಫ್ ಯಾಕೆ ಮಾಡಿಕೊಂಡಿದ್ದೀರೆಂದು ವಿಚಾರಿಸಲಾಗಿ ರೇಣುಕಾ ಜೇಬಿಗೆ ಕೈಹಾಕಿದ್ದಾರೆ. ಏನಿತ್ತು ಜೇಬಲ್ಲಿ? ಆಗಲೇ ರೇಣುಕಾಚಾರ್ಯ ಕಳವಳಕ್ಕೀಡಾಗಿದ್ದಾರೆ. ಕಳವಳಕ್ಕೆ ಕಾರಣವೇನು ಗೊತ್ತಾ? Next ಕ್ಲಿಕ್ಕಿಸಿ.











Click it and Unblock the Notifications