ರೇಣುಕಾ ಕಳವಳಕ್ಕೆ ಕಾರಣವೇನು ಗೊತ್ತಾ?
ಐಫೋನ್
ಕಳುವಾಗುತ್ತಿದ್ದಂತೆ ರೇಣುಕಾಚಾರ್ಯ ತೀವ್ರ ಕಳವಳಕ್ಕೊಳಗಾಗಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಳವಳಕ್ಕೆ ಕಾರಣ ಐಫೋನ್ 40 ಸಾವಿರ ರು. ಬೆಲೆಬಾಳುವುದೆಂದಲ್ಲ. ಇಂಥ 10 ಐಫೋನ್ ತರಿಸಿಕೊಳ್ಳುವ ತಾಕತ್ತು ಅವರಲ್ಲಿದೆ. ಆದರೆ, ಅದರಲ್ಲಿ ಅನೇಕ ರಹಸ್ಯ ಮಾಹಿತಿಯನ್ನು ರೇಣುಕಾಚಾರ್ಯ ಶೇಖರಿಸಿಟ್ಟಿದ್ದರು. ಯಾರದೋ ಕೈಗೆ ಸಿಕ್ಕು ರಹಸ್ಯಗಳೆಲ್ಲ ಬಯಲಾಗುವುದೆಂಬ ಭಯ. id="toptextpromo">ಐಫೋನ್
ಕಳುವಾಗಿರುವುದು ತಿಳಿಯುತ್ತಿದ್ದಂತೆಯೆ, ಅವರನ್ನು ಹೊತ್ತು ಕುಣಿದಾಡಿ ಡಾನ್ಸ್ ಮಾಡಿದ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧವೇ ರೇಣುಕಾ ಹರಿಹಾಯ್ದಿದ್ದಾರೆ. ಹೊತ್ತವನು ತಿರುಗಿ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ಕಳ್ಳರೆಂದೂ ಪ್ರಾಮಾಣಿಕರಾಗಿರುವುದಿಲ್ಲ, ರೇಣುಕಾಚಾರ್ಯರಿಗೆ ತಿಳಿದಿರಲಿ! id='are-slot-1' class='oiad oi-axt oiadv'> id='top-searched-articles'>ದೂರು
ಸ್ವೀಕರಿಸಿ ತನಿಖೆ ಆರಂಭಿಸಿರುವ ಹೈಗ್ರೌಂಡ್ಸ್ ಪೊಲೀಸರು ಸಿಸಿಟಿವಿ ಫುಟೇಜ್ ಬೇಕೆಂದು ಕೇಳಿದ್ದಾರೆ. ಕಳ್ಳನ ಹುಡುಕಲು ಜಾಲ ಬೀಸಿದ್ದಾರೆ. ಹಾಗೆಯೆ, ಹ್ಯಾಂಡ್ ಸೆಟ್ ನ IMEA ನಂಬರ್ ಬೇಕೆಂದು ಕೇಳಿದ್ದಾರೆ.











Click it and Unblock the Notifications