ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಡಿ ಗೆಲುವು ಯಡಿಯೂರಪ್ಪ ಪಾದ ಕಮಲಕ್ಕೆ ಅರ್ಪಣೆ

By Srinath
|
Google Oneindia Kannada News

Karadi, BSY
ಕೊಪ್ಪಳ, ಸೆ.29: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸವಾಲಿನಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ. 11ನೇ ಎಣಿಕೆ ಮುಕ್ತಾಯಗೊಂಡು 15,000 ಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ತಮ್ಮ ಗೆಲುವು ಖಚಿತವಾಗುತ್ತಿದ್ದಂತೆ ಅದನ್ನು ಯಡಿಯೂರಪ್ಪ ಅವರ ಪಾದ ಕಮಲಕ್ಕೆ ಅರ್ಪಿಸಿದ್ದಾರೆ.

ಬಿಜೆಪಿ ಕರಡಿ ಸಂಗಣ್ಣ ಅವರು ಎಲ್ಲ 15 ಸುತ್ತುಗಳ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡಿರುವುದು ಗಮನಾರ್ಹ. ಅವರು 12,000ಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಬಸವರಾಜ ಕೆ. ಹಿಟ್ನಾಳ್ ಅವರಿಗಿಂತ ಸಾಕಷ್ಟು ಮುಂದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕರಡಿ ಸಂಗಣ್ಣ (ಬಿಜೆಪಿ) - 57,224
ಬಸವರಾಜ ಹಿಟ್ನಾಳ್ (ಕಾಂಗ್ರೆಸ್) - 44,979
ಪ್ರದೀಪ್ ಗೌಡ (ಜೆಡಿಎಸ್) - 19,339

ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮಾಜಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಪ್ರಸಕ್ತ ಬಿಜೆಪಿ ಪರ ಭರ್ಜರಿ ಪ್ರದರ್ಶನ ನೀಡಿದರು. ಬಿಜೆಪಿ ಕಾರ್ಯಕರ್ತರ ವಿಜಯೋತ್ಸಾಹ ಎಲ್ಲೆಲ್ಲೂ ಕಂಡುಬಂದಿದೆ. ಜೆಡಿಎಸ್ ಪಕ್ಷಕ್ಕೆ ಫಲಿತಾಂಶ ತುಸು ಆಶ್ಚರ್ಯ ತಂದಿದೆ. ಏಕೆಂದರೆ ಜೆಡಿಎಸ್ಸನ್ನು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ನೂಕಿದೆ. ಇನ್ನು, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಪಕ್ಷೇತರರಾಗಿ ತಮ್ಮ ಅದೃಷ್ಟವನ್ನೂ ಪರೀಕ್ಷಿಸಿಕೊಳ್ಳಲು ಕಣಕ್ಕಿಳಿದಿದ್ದ 11 ಅಭ್ಯರ್ಥಿಗಳು ಬೋರ್ಡಿಗೂ ಇಲ್ಲದಂತಾಗಿದ್ದಾರೆ.

English summary
Koppal Legislative Assembly By-election vote counting is in the last leg.(September 29, 11.30 am). BJP candidate Karadi Sanganna is marching towards victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X