ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಸಂಸದ ಸದಾನಂದ ಗೌಡ ರಾಜೀನಾಮೆ

By Mahesh
|
Google Oneindia Kannada News

DV Sadananda gowda
ಬೆಂಗಳೂರು, ಸೆ.29: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಶೀಘ್ರದಲ್ಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ಕೋರ್ ಸಮಿತಿ ಆದೇಶದಂತೆ ಪರಿಷತ್ತಿನ ಸದಸ್ಯರಾಗಲು ಸದಾನಂದಗೌಡರು ತಯಾರಿ ನಡೆಸಿದ್ದಾರೆ.

ಕರ್ನಾಟಕ ಅಸೆಂಬ್ಲಿಯ ಯಾವುದೇ ಮನೆ(ವಿಧಾನಸಭೆ, ಪರಿಷತ್ತು)ಯ ಸದಸ್ಯರಲ್ಲದ ಸಂಸದ ಸದಾನಂದ ಗೌಡರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಯಾವುದಾದರೂ ಮನೆ ಸೇರಬೇಕು ಎನ್ನುತ್ತದೆ ಕಾನೂನು.

ಯಡಿಯೂರಪ್ಪ ಆಪ್ ಎಂಎಲ್ ಸಿ ಲೆಹರ್ ಸಿಂಗ್ ತಮ್ಮ ಸ್ಥಾನವನ್ನು ಸದಾನಂದ ಗೌಡರಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ. ಆದರೆ, ನಾಮಾಂಕಿತ ಸದಸ್ಯರಾಗಿರುವುದರಿಂದ ಸ್ಥಾನದಿಂದ ತೆರವುಗೊಳಿಸಲು ರಾಜ್ಯಪಾಲ ಎಚ್ ಭಾರದ್ವಾಜ್ ಅವರ ಅನುಮತಿ ಬೇಕಾಗುತ್ತದೆ.

ಲೆಹರ್ ಸಿಂಗ್ ಇಲ್ಲದಿದ್ದರೆ ಶೋಭಾ ಕರಂದ್ಲಾಜೆ ಆಪ್ತೆ ಭಾರತಿ ಶೆಟ್ಟಿ ಅವರು ತಮ್ಮ ಕ್ಷೇತ್ರದ ನಾಯಕ ಸದಾನಂದ ಗೌಡ ಅವರಿಗೆ ಸ್ಥಾನ ಬಿಟ್ಟು ಕೊಡಬಹುದು.

ಈ ನಡುವೆ ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆ ಕೂಡಾ ಬಾಕಿಯಿದೆ. ಆರು ಸ್ಥಾನಕ್ಕೆ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದಾರೆ. ಸಿಟಿ ರವಿ, ಡಿಎನ್ ಜೀವರಾಜ್, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್ ರೇಸ್ ನಲ್ಲಿರುವ ಪ್ರಮುಖರಾಗಿದ್ದಾರೆ.

English summary
BJP has given permission to Karnataka CM Sadananda Gowda to resign from his MP and become become an MLC. DVS will be eligible to enter Assembly on if he becomes member of either House within six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X