ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಭ್ರಷ್ಟರ ಬಯಲಿಗೆಳೆದ ಸ್ವಾಮಿಗೆ ಉಗ್ರರ ಭೀತಿ

By Mahesh
|
Google Oneindia Kannada News

Ex MP Subramanium Swamy
ನವದೆಹಲಿ, ಸೆ.27: 2ಜಿ ತರಂಗಗುಚ್ಛ ಹಂಚಿಕೆ ಹಗರಣದ ರುವಾರಿಗಳನ್ನು ಕೋರ್ಟಿಗೆ ಎಳೆದ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇಸ್ಮಾಮಿಕ್ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆ ಉಂಟಾಗಿದೆ.

ಯುಪಿಎ ಸರ್ಕಾರದ ಬುಡಕ್ಕೆ ಕೈ ಹಾಕಿರುವ ಸುಬ್ರಮಣ್ಯಂ ಸ್ವಾಮಿ ಈಗ ರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಪ್ರಸಂಗ ನಡೆದಿದೆ.

ಮಾಜಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ, ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ 2ಜಿ ಹಗರಣದ ವಿರುದ್ಧ ದೂರು ದಾಖಲಿಸಿದ್ದ ಪರಿಣಾಮ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹಾಗೂ ಜಿಹಾದಿ ಸಂಘಟನೆಗಳಿಂದ ಜೀವ ಬೆದರಿಕೆ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದು ಪರಂಪರೆಯನ್ನು ಗೌರವಿಸದ ಮುಸ್ಲಿಮರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ಸುಬ್ರಮಣ್ಯಂ ಸ್ವಾಮಿ ನೀಡಿದ್ದರು.

ಅಮೆರಿದಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿರುವ ಕಾಲದಲ್ಲಿ ಬಿಗಿ ಭದ್ರತೆಯನ್ನು ಒದಗಿಸಬೇಕು ಎಂದು ಸ್ವಾಮಿ ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮನೆಗೆ ಭದ್ರತೆ ಬೇಕು: ದೆಹಲಿ ಕೇಂದ್ರ ಭಾಗದಲ್ಲಿರುವ ಪಂಡಾರಾ ರಸ್ತೆ, ಮಥುರಾ ರಸ್ತೆ ಅಥವಾ ಝಾಕೀರ್ ಹುಸೇನ್ ಮಾರ್ಗ್‌ ನಲ್ಲಿ ಅಧಿಕೃತ ನಿವಾಸಕ್ಕಾಗಿ ಮನವಿ ಮಾಡಿದ್ದಾರೆ.

ಸುಬ್ರಮಣ್ಯಂ ಸ್ವಾಮಿಗೆ ಅಲ್ ಖೈದಾ, ಎಲ್ ಟಿಟಿಇ ಸಂಘಟನೆಯಿಂದ ಬೆದರಿಕೆ ಪತ್ರಗಳು ಬಂದಿದೆ. 2 ಜಿ ಹಗರಣದಲ್ಲಿ ಗೃಹ ಸಚಿವ ಚಿದಂಬರಂ, ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಅಳಿಯ ರಾರ್ಬಟ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿರುವ ಬಗ್ಗೆ ಸುಬ್ರಮಣ್ಯಂ ಸ್ವಾಮಿ ದಾವೆ ಹೂಡಿದ್ದಾರೆ.

English summary
Subramanian Swamy, Janata Party Leader has expressed his concern over his security after he alleged that he was under threat from Congress activists and Islamic radical and sought a house in safer environment in Central Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X