ಆಂಬುಲನ್ಸ್ ಮುಷ್ಕರಕ್ಕೆ ಮುಖ್ಯಮಂತ್ರಿ ಚುಚ್ಚುಮದ್ದು
ಬೆಂಗಳೂರು,
ಸೆ. 27 : ತಮ್ಮನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ಇಂದು ರಾತ್ರಿಯಿಂದ ಸತ್ಯಾಗ್ರಹ ನಡೆಸಲು ಉದ್ದೇಶಿಸಿರುವ 108 ತುರ್ತು ಚಿಕಿತ್ಸೆ ಆಂಬುಲನ್ಸ್ ನೌಕರರ ಎರಡು ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ವಾಗ್ದಾನ ನೀಡಿದ್ದಾರೆ. id="toptextpromo">ನಿರಶನದಿಂದ
ರೋಗಿಗಳಿಗೆ ತೊಂದರೆಯಾಗುತ್ತಿರುವುದರಿಂದ ಕೂಡಲೆ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಅವರು ನೌಕರರನ್ನು ಆಗ್ರಹಿಸಿದರು. ರಾಜ್ಯದಲ್ಲಿ ಒಟ್ಟು 517 ತುರ್ತು ಚಿಕಿತ್ಸಾ ವಾಹನಗಳಿವೆ. ನೌಕರರು ದಿನಕ್ಕೆ 10ರಿಂದ 12 ಗಂಟೆ ದುಡಿಯುತ್ತಾರೆ. ಅವರ ಆಗ್ರಹಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಅವರು ನುಡಿದರು. id='are-slot-1' class='oiad oi-axt oiadv'> id='top-searched-articles'>ಆಂಬುಲನ್ಸ್
ನೌಕರರು ಮುಂದಿಟ್ಟಿರುವ ನಾಲ್ಕು ಬೇಡಿಕೆಗಳಲ್ಲಿ ಒಂದೆರಡು ನ್ಯಾಯಸಮ್ಮತವಾಗಿವೆ. ಆದ್ದರಿಂದ ಕೂಡಲೆ ಆ ಬೇಡಿಕೆಗಳನ್ನು ಈಡೇರುಸುತ್ತೇವೆ. ಆದರೆ, ಕೂಡಲೆ ಎಲ್ಲ ಬೇಡಿಕೆಗಳನ್ನು ಪೂರೈಸುವುದು ಸಾಧ್ಯವಿಲ್ಲ ಎಂದು ಅವರು ನೌಕರರನ್ನು ಉದ್ದೇಶಿಸಿ ಹೇಳಿದರು.











Click it and Unblock the Notifications