ಯೋಗೀಶ್ವರ್ ಯೋಗಾ ಕಳೆದುಕೊಂಡಿರುವುದು ದಿಟ: ರಾಜಭವನ

ಹೊರಗಾದ ಸದಾನಂದರು ಮಾಧ್ಯಮದೆದುರು ಇಲ್ಲ, ಅಂಥಾದ್ದೇನೂ ಇಲ್ಲ. ಸುಮ್ನೆ, ಸುಮ್ ಸುಮ್ನೆ ಕರೆಸಿದ್ದರು ಎಂದು ಜಾರಿಕೊಳ್ಳಲು ಯತ್ನಿಸಿದ್ದಾರಾದರೂ, ಯೋಗೀಶ್ವರ್ ಯೋಗಾ ಕಳೆದುಕೊಂಡಿರುವುದು ದಿಟ ಎಂದು ರಾಜಭನವದ ಗಿಡಮರಗಳು ಪಿಸುಗುಟ್ಟಿವೆ.
ಅದಕ್ಕೂ ಮುನ್ನ ಶನಿವಾರ ಬೆಳ್ಳಂಬೆಳಿಗ್ಗೆ ಯೋಗೀಶ್ವರ್ ವಿರುದ್ಧ ಮೆಗಾ ಸಿಟಿ ಸಂತ್ರಸ್ತರು ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಸಂಜೆ ವೇಳೆಗೆ ಮೆಗಾಸಿಟಿ ಯೋಜನೆಗೆ ಸಂಬಂಧಿಸಿದ ಕಡತಗಳು ಹಾಗೂ ಕೇಂದ್ರ ಸರಕಾರದ ವರದಿಯನ್ನು ತರಿಸಿಕೊಂಡಿದ್ದ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಬುಲಾವ್ ನೀಡಿ, ಸ್ಪಷ್ಟನೆ ಕೋರಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮರೆತ ಮಾತು: ಮುಖ್ಯಮಂತ್ರಿ ಸದಾನಂದರ ಜತೆಗಿನ ಭೇಟಿಯ ವೇಳೆ ರಾಜ್ಯಪಾಲರು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಮಾಹಿತಿ ಆಯುಕ್ತ ಎಚ್.ಎನ್. ಕೃಷ್ಣ ವಿರುದ್ಧದ ಕ್ರಿಮಿನಲ್ ಪ್ರಕರಣದ ಬಗ್ಗೆಯೂ ತಮ್ಮ ಹಕ್ಕು ಚಲಾಯಿಸಿ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.












Click it and Unblock the Notifications