ಹುಬ್ಬಳ್ಳಿ ವಿಮಾನ ಹೈಜಾಕ್, ಮುಂಬೈ ಸ್ಫೋಟಕ್ಕೆ ಸ್ಕೆಚ್?

ಸಂಭವನೀಯ ದಾಳಿ ಬಗ್ಗೆ ಬೆದರಿಕೆ ಕರೆ ಬಂದಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರೀಯ ದಳ ವಿಮಾನ ನಿಲ್ದಾಣದ ಪರೀಶೀಲನೆ ನಡೆಸಿದ್ದಾರೆ. ಜನತೆ ಆತಂಕಗೊಳ್ಳುವ ಕಾರಣವಿಲ್ಲ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಕೆ.ರಾಮಚಂದ್ರ ರಾವ್ ಹೇಳಿದ್ದಾರೆ.
ಸ್ಕೆಚ್ ಏನು: ಹುಬ್ಬಳ್ಳಿಯಿಂದ ಲಘು ವಿಮಾನವನ್ನು ಅಪಹರಿಸಿ, ಭಾರಿ ಶಸ್ತ್ರಾಸ್ರಗಳ ಮೂಲಕ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉಡಾಯಿಸುವುದು ಉಗ್ರರ ಉದ್ದೇಶವಾಗಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ಈಗಾಗಲೇ ಎನ್ಎಸ್ ಜಿ ಕಮ್ಯಾಂಡೋಗಳು ಆಗಮಿಸಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ನವರಾತ್ರಿ, ದಸರಾ ಹಬ್ಬದ ಸಾಲುಗಳ ಮುನ್ನ ಈ ರೀತಿ ಬೆದರಿಕೆ ಕರೆ ಬಂದಿರುವುದು ಆತಂಕ ಕಾರಣವಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಎಲ್ಲಾ ಸಣ್ಣಪುಟ್ಟ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಸುರಕ್ಷಿತ ಕ್ರಮಗಳನ್ನು ಅಳವಡಿಸಲು ಗುಪ್ತಚರ ಇಲಾಖೆ ಸೂಚಿಸಿದೆ.












Click it and Unblock the Notifications