ತೆಲಂಗಾಣ ಎಫೆಕ್ಟ್: ರಾಯಚೂರು ಟೋಟಲ್ ಬಂದ್

ವರ್ತಕರು ಹಾಗೂ ಸಾರಿಗೆ ಮತ್ತು ರೈಲ್ವೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಶನಿವಾರದಂದು ಆಟೋರಿಕ್ಷಾ, ಬಸ್ ಕೂಡಾ ಸಂಚಾರ ನಿಲ್ಲಿಸಿದ ವರದಿಗಳು ಬಂದಿದೆ.
ರಾಯಚೂರಿನಿಂದ ಬಹುತೇಕ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಕುಶಲಕರ್ಮಿಗಳು, ಆಟೋ ಮೊಬೈಲ್ ವರ್ತಕರು, ಶುಂಠಿ ಬೆಳೆಗಾರರು ಹೈದ್ರಾಬಾದ್ ನಿಂದ ಸಿಕಿಂದ್ರಾಂಬಾದ್‌ನಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸಲು ಹೋಗಿ ಬರುವುದು ದೈನಂದಿನ ಕಾರ್ಯಕ್ರಮವಾಗಿದೆ.
ಆದರೆ, ಸುಮಾರು 72 ಎಕ್ಸ್ ಪ್ರೆಸ್ ರೈಲು ಮತ್ತು 264 ಪ್ಯಾಸೆಂಜರ್ ಟ್ರೈನ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ಕೇಂದ್ರ ರೈಲ್ವೇ ಇಲಾಖೆ ಪ್ರಕಟಿಸಿದೆ.
ಸೋಮವಾರ ಕೂಡಾ ಬಸ್ ಮತ್ತು ರೈಲ್ವೆ ಸಂಚಾರ ಇಲ್ಲದೆ ಇರುವುದರಿಂದ ರಾಯಚೂರಿನಲ್ಲೇ ಉಳಿದಿರುವ ಪ್ರಯಾಣಿಕರು ಆಂಧ್ರಪ್ರದೇಶದ ವಿವಿಧ ಪಟ್ಟಣಗಳಿಗೆ ತಲುಪಲು ಪ್ರಯಾಸ ಪಡಬೇಕಾಗಿದೆ.
ಗುಲಬರ್ಗಾಕ್ಕೆ ತಟ್ಟಿದೆ ಬಿಸಿ: ಗುಲಬರ್ಗಾದಿಂದ ಸಹ ಹೈದ್ರಾಬಾದ್‌ಗೆ ತೆರಳುವ ಬಹುತೇಕ ರೈಲು ಮತ್ತು ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಅಲ್ಲಿನ ಪ್ರಯಾಣಿ
ಕರು ಸಹ ಪರದಾಡುತ್ತಿದ್ದಾರೆ. ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣತೆತ್ತು ಕೆಲವರು ತಮ್ಮ ಹಾದಿ ಹಿಡಿದಿದ್ದಾರೆ. ಆದರೆ, ಹಲವರು ಬಸ್ ನಿಲ್ದಾಣದಲ್ಲೇ ಕಾಲದೂಡುತ್ತಿದ್ದಾರೆ.












Click it and Unblock the Notifications