ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ವಿರುದ್ಧ ಸಿಬಿಐ ತನಿಖೆಗೆ ನ್ಯಾ.ಹೆಗ್ಡೆಯೇ ಕಾರಣ

By Srinath
|
Google Oneindia Kannada News

sc-karnataka-illegal-minig-santosh-hegde-welcomes
ಬೆಂಗಳೂರು, ಸೆ.24: ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಅರುಣಾ ಲಕ್ಷ್ಮಿ ಅವರುಗಳ ವಿರುದ್ಧ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಲು ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರೇ ಕಾರಣ ಎನ್ನಬಹುದು. ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಬಗ್ಗೆ ನ್ಯಾ. ಹೆಗ್ಡೆ ಸಲ್ಲಿಸಿರುವ ಸಮಗ್ರ, ಸತ್ವಯುತ ವರದಿ ಮೇಲೆ ರಾಜ್ಯ ಬಿಜೆಪಿ ಸರಕಾರ ಪವಡಿಸಿದೆಯಾದರೂ ವರದಿ ಎಲ್ಲಿ ಕೆಲಸ ಮಾಡಬೇಕೋ ಅಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಅಕ್ರಮ ಗಣಿಗಾರಿಕೆ ಬಗ್ಗೆ ನ್ಯಾ. ಹೆಗ್ಡೆ ಅವರು ಸಿದ್ಧಪಡಿಸಿದ ವರದಿ ಸುಪ್ರೀಂಕೋರ್ಟಿನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) 'ಅತ್ಯುತ್ತಮ ಗೈಡ್' ಆಗಿ ರೆಡ್ಡಿಯ ಅಕ್ರಮ ಗಣಿಗಾರಿಕೆಯ ಆಳ-ಅಗಲಗಳನ್ನು ಪರಿಚಯಿಸಿದೆ.

'ನಾನು ಹೇಳಿರಲಿಲ್ವಾ! ಕರ್ನಾಟಕದಲ್ಲಿ ರೆಡ್ಡಿಯ ಗಣಿಗಾರಿಕೆ ದಂಧೆ ಅವ್ಯಾಹತವಾಗಿ ನಡೆದಿದೆ ಎಂದು. ಕರ್ನಾಟಕದಲ್ಲಿ ಒಂದಿಂಚು ಭೂಮಿಯಲ್ಲೂ ಗಣಿಗಾರಿಕೆ ನಡೆಸಿಲ್ಲ ಎಂದು ರೆಡ್ಡಿ ಎಷ್ಟೇ ಬೊಂಬಡಾ ಹೊಡೆದಿದ್ದರೂ ನಾನು ದಾಖಲೆ ಸಮೇತ ಅದನ್ನು ರುಜುವಾತುಪಡಿಸಿದ್ದೆ. ಈಗ ನನ್ನ ವರದಿ ಕೆಲಸ ಮಾಡುತ್ತಿದೆ' ಎಂದು ನ್ಯಾ. ಹೆಗ್ಡೆ ಅವರು ಸುಪ್ರೀಂಕೋರ್ಟ್ ನಿರ್ದೇಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

English summary
The Supreme Court has directed CBI to investigate Reddy's AMC illegal minig in Karnataka. Justice Santosh Hegde who had sumitted his report on Illegal Mining in Karnataka is the root cause for the SC direction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X