ಶಾಂತಿಭೂಷಣರ 'ರಿಪಬ್ಲಿಕ್ ಆಫ್ ಬಳ್ಳಾರಿ' ವಾದ ರೆಡ್ಡಿಗೆ ಮುಳುವಾಯಿತು

sc-karnataka-illegal-minig-santosh-hegde-report
ಬೆಂಗಳೂರು, ಸೆ.24: ಜನಾರ್ದನ ರೆಡ್ಡಿ ವಿರುದ್ಧ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಡುವಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಪ್ರತಿವಾದ ಬಹಳಷ್ಟು ಪರಿಣಾಮಕಾರಿಯಾಗಿದೆ.

ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಹಿರೇಮಠರ ಸಾಮಾಜಿಕ ಪರಿವರ್ತನಾ ಸಮಿತಿಯ ಪರ ತಮ್ಮ ವಾದವನ್ನು ಮಂಡಿಸಿದ್ದಾರೆ. ವಾದ-ಪ್ರತಿವಾದದ ಒಂದು ಹಂತದಲ್ಲಿ ಪ್ರಶಾಂತ್ ರ ಕೈಹಿಡಿದಿದ್ದೇ ನ್ಯಾ. ಹೆಗ್ಡೆ ಅವರ ಅಕ್ರಮ ಗಣಿಗಾರಿಕೆ ವರದಿ.

ಹೇಳಿ ಕೇಳಿ ಪ್ರಶಾಂತ್, ಅವರಪ್ಪ ಶಾಂತಿಭೂಷಣ್ ಮತ್ತು ಸಂತೋಷ್ ಹೆಗ್ಡೆ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿಗಳು. ಇವರ ಗೆಳೆತನ ಗಾಢವಾಗಿಯೇ ಇದೆ. ಇತ್ತೀಚೆಗೆ ಜನ ಲೋಕಪಾಲ ಮಸೂದೆ ಸಂಬಂಧ ನಾಗರಿಕ ಸಲಹಾ ಸಮಿತಿಯಲ್ಲಿ ಈ ತ್ರಿಮೂರ್ತಿಗಳು ತಮ್ಮ ಗೆಳೆತನವನ್ನು ನವೀಕರಿಸಿಕೊಂಡಿದ್ದರು ಎಂಬುದು ಗಮನಾರ್ಹ.

ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿಯಲ್ಲಿ 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂಬ ಪ್ರತ್ಯೇಕ ಅಧ್ಯಾಯವೇ (ಛಾಪ್ಟರ್ 28) ಇದೆ. ಅದರಲ್ಲಿದೆ ರೆಡ್ಡಿಯ ಅಕ್ರಮ ಗಣಿಗಾರಿಕೆಯ ಆಳ-ಅಗಲಗಳ ಒಳಕೋವೆಗಳು.

ಸರಕಾರಿ ವಕೀಲ ರಾಜು ರಾಮಚಂದ್ರನ್ ಇನ್ನೇನು ಪ್ರಶಾಂತ್ ಗೆ ಮಣ್ಣುಮುಕ್ಕಿಸಿದೆ ಎಂಬ ಸಂತಸದಲ್ಲಿದ್ದಾಗ, ಪ್ರಶಾಂತ್ ಛಕ್ಕಂತ ಛಾಪ್ಟರ್ 28 ತೆರೆದವರೆ 'ಮೈಲಾರ್ಡ್! ಇಲ್ಲಿದೆ. ರೆಡ್ಡಿ ತನ್ನ ಜಿಲ್ಲೆಯಲ್ಲಿ ನಡೆಸಿರುವ ಗಣಿ ಅಕ್ರಮಗಳ ವೃತ್ತಾಂತ. ದಯವಿಟ್ಟು ಪರಾಮರ್ಶಿಸಿ' ಎನ್ನುತ್ತಿದ್ದಂತೆ ರಾಮಚಂದ್ರನ್ ರ ಜಂಘಾಬಲವೇ ಉಡುಗಿ ಹೋಗಿದೆ.

ಇನ್ನು, ಜೈನ್ ಎಂಬ ಮತ್ತೊಬ್ಬ ಅಕ್ರಮ ಗಣಿ ಪಾಖಂಡಿಯ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ವಿರುದ್ಧವೂ ಈಗ ಸಿಬಿಐ ತನಿಖೆ ನಡೆಯಲಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಈ ಸಿಂಡಿಕೇಟ್ ಕಂಪನಿ ಕಚೇರಿಯೊಂದಿದ್ದರೆ ಬಳ್ಳಾರಿಯಲ್ಲಿ ಕಾರ್ಪೊರೇಟ್ ಆಫೀಸ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+