ಅಕ್ರಮ ಆಸ್ತಿ ದೂರು: ಬಾಲಕೃಷ್ಣೇಗೌಡ ವಿರುದ್ದ ಯಡ್ಡಿಯ ಕುತಂತ್ರ?

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಇದೇ ಲೋಕಾಯುಕ್ತ ಕೋರ್ಟಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದರೆನ್ನಲಾದ ಮಾಜಿ ಪ್ರಧಾನಿ ದೇವೇಗೌಡರು ಈಗ ಅಂತಹುದೇ ತಂತ್ರದ ರುಚಿ ಕಾಣುವಂತಾಗಿದೆ.
ದೂರುದಾರರಾದ ಬಾಲಕೃಷ್ಣರೇನೋ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವೇ ನನ್ನ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದೇನೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ದುರುದ್ದೇಶವಿಲ್ಲ' ಎಂದು ನ್ಯಾಯಾಧೀಶ ನ್ಯಾ.ಎನ್.ಕೆ. ಸುದೀಂದ್ರ ರಾವ್ ಅವರ ಎದುರು ವಿನಮ್ರವಾಗಿ ಹೇಳಿದ್ದಾರೆ. ಆದರೆ...
ರಾಜಕೀಯ ವಲಯಗಳಿಂದ ಕೇಳಿಬರುತ್ತಿರುವ ಮಾತೇ ಬೇರೆ: ಇದು ದೊಡ್ಡಗೌಡರಿಗೆ ಯಡಿಯೂರಪ್ಪ ನೀಡಿರುವ ಎದಿರೇಟು ಎಂದು ಅರ್ಥೈಸಲಾಗಿದೆ. ಈ ಸಾಹಸದಲ್ಲಿ ಯಡಿಯೂರಪ್ಪ ಜತೆ ಅಶೋಕ್ ಖೇಣಿ ಸಹ ಕೈಜೋಡಿಸಿದ್ದಾರೆ. ಖೇಣಿಯೇ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ ಎಂಬ ಮಾತುಗಳಿವೆ.
'ಇದು ಯಡಿಯೂರಪ್ಪನವರದೇ ಕುತಂತ್ರ. ಅವರನ್ನೇ ಕೇಳಿ ಇದನ್ನೆಲ್ಲ ಯಾಕೆ ಮಾಡುತ್ತಿದ್ದಾರೆ ಎಂದು. ನನ್ನ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ದುಡಿದಿದ್ದೇನೆ. ಇದನ್ನೆಲ್ಲ ಎದುರಿಸಲು ನಾನು ಸಿದ್ಧ. ಅದಕ್ಕೂ ಮುನ್ನ ನಾನೇನು ತಪ್ಪು ಮಾಡಿದ್ದೇನೆ ಎಂಬುದನ್ನು ಅವರು ಸಾಬೀತುಪಡಿಸಲಿ' ಎಂದು ಬಾಲಕೃಷ್ಣೇಗೌಡರು ಸವಾಲು ಹಾಕಿದ್ದಾರೆ. 2005ರಲ್ಲಿ ಬಾಲಕೃಷ್ಣೇಗೌಡರು ಸ್ವಯಂ ನಿವೃತ್ತಿ ಪಡೆದಿದ್ದರು.












Click it and Unblock the Notifications