ಅನಂತ ಬಿ ಉಗ್ರಾಣ ತೆರೆಯುವುದು ಬೇಡ: ಸುಪ್ರೀಂಕೋರ್ಟ್
ನವದೆಹಲಿ,
ಸೆ. 22: ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ 'ಬಿ" ಉಗ್ರಾಣದ ದ್ವಾರ ತೆಗೆಯುವುದು ಬೇಡ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. id="toptextpromo">ಇನ್ನು
ಮೂರು ತಿಂಗಳು ಈ ವಿಷಯದ ಬಗ್ಗೆ ಮಾತಾಡುವುದು ಬೇಡ. ಮೊದಲು ಈಗಾಗಲೇ ಪತ್ತೆ ಹಚ್ಚಿರುವ ಅನಂತ ಸಂಪತ್ತಿನ ಮೌಲ್ಯಮಾಪನವನ್ನು ಸರಿಯಾಗಿ ಮಾಡಿ ಮುಗಿಸಿ. ಆಮೇಲೆ ಬಿ ಉಗ್ರಾಣದ ಬಗ್ಗೆ ನೋಡುವ ಎಂದು ಸುಪ್ರೀಂ ನ್ಯಾಯಪೀಠ ಸೂಚಿಸಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ಇಡೀ ಸಂಪತ್ತಿನ ಭದ್ರತೆ ಕಾಪಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಈ ಬಾಬತ್ತಿಗೆ ರಾಜಮನೆತನವೂ 25 ಲಕ್ಷ ರುಪಾಯಿ ಸಂದಾಯ ಮಾಡಬೇಕು. ಪತ್ತೆಯಾಗಿರುವ ರಹಸ್ಯ ನಿಧಿಯ ತಪಾಸಣೆ ನಡೆದು, ಡಿಜಿಟಲ್ ದಾಖಲಾತಿ ನಡೆಸಬೇಕು. ಇದು ರಾಜ್ಯ ಸರಕಾರದ ಅಧೀನದಲ್ಲೇ ನಡೆಯಲಿ ಎಂದೂ ನ್ಯಾಯಪೀಠ ಹೇಳಿದೆ.











Click it and Unblock the Notifications