ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಸಾವಿನ ಲಾಭ ಯಾರಿಗಾಯ್ತು?:ವಿಕಿಲೀಕ್ಸ್ ವರದಿ

By Mahesh
|
Google Oneindia Kannada News

Veerappan
ಕೊಯಮತ್ತೂರು, ಸೆ.19: ಕಾಡುಗಳ್ಳ, ದಂತಚೋರ ವೀರಪ್ಪನ್ ನನ್ನು ಸ್ಪೆಷಲ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಕೊಂದ ನಂತರ ಅವರಿಗೆ ಒಂದು ರೀತಿ ಭಯ ಆವರಿಸಿತ್ತು. ಜೂ ವೀರಪ್ಪನ್ ಯಾರಾಗ ಬಹುದು ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿತ್ತು ಎಂದು ವೀಕಿಲೀಕ್ಸ್ ವರದಿ ಮಾಡಿದೆ.

2004ರಲ್ಲಿ ವೀರಪ್ಪನ್ ಗುಂಡೇಟಿಗೆ ಬಲಿಯಾದ ನಂತರ ಅವನ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ವಿಷಯದ ಬಗ್ಗೆ ಚೆನ್ನೈನಲ್ಲಿರುವ ಅಮೆರಿಕ ದೂತವಾಸ ಕಚೇರಿ ಹಿರಿಯ ಅಧಿಕಾರಿ ರಿಚರ್ಡ್ ಡಿ ಹೇಯ್ನ್ಸ್ ಜೊತೆ ತಮಿಳುನಾಡಿನ ಐಎಎಸ್ ಅಧಿಕಾರಿ ಪಿಚಾಂಡಿ ಅವರು ಚರ್ಚೆ ನಡೆಸಿದ್ದರು.

ವೀರಪ್ಪನ್ ಕಾರ್ಯಕ್ಷೇತ್ರವಾದ ಆರ್ಥಿಕವಾಗಿ ದುರ್ಬಲವಾಗಿರುವ ಧರ್ಮಪುರಿ ಜಿಲ್ಲೆಯಲ್ಲಿ ಮತ್ತೊಬ್ಬ ನರಹಂತಕ ಹುಟ್ಟಿಕೊಳ್ಳುವ ಆತಂಕ ಎದುರಾಗಿತ್ತು.

ವೀರಪ್ಪನ್ ಕೊಂದ ನಂತರ ಅರಣ್ಯ ಸಂಪತ್ತಿನ ಮೇಲೆ ಅಧಿಕಾರ ಹೊಂದಲು ತಮಿಳುನಾಡು ಸರ್ಕಾರಕ್ಕೆ ಸುಲಭವಾಗುತ್ತದೆ ಎಂದು ಎನಿಸಲಾಗಿತ್ತು.

ವೀರಪ್ಪನ್ ನಂತರ ನಿಗೂಢವಾದ ದಟ್ಟಾರಣ್ಯದ ಮೇಲೆ ಪ್ರಭುತ್ವ ಸಾಧಿಸಲು ಆಂಧ್ರ ಪ್ರದೇಶದಿಂದ ನಕ್ಸಲೈಟ್ ಗಳು ವಲಸೆ ಬರುವ ಸಾಧ್ಯತೆಯೂ ಇತ್ತು.

ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಜಿಲ್ಲೆಯ ಜನರನ್ನು ಎಚ್ಚರಿಸಿ, ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಲು ನಕ್ಸಲರು ಯೋಜಿಸಿದ್ದರು.

ಆದರೆ, ನಕ್ಸಲರಿಗೆ ವೀರಪ್ಪನ್ ಗೆ ಇದ್ದಷ್ಟು ಅರಣ್ಯ ಪರಿಸರದ ಬಗ್ಗೆ ಜ್ಞಾನವಿರಲಿಲ್ಲ. ಜನರನ್ನು ಒಂದುಗೂಡಿಸಿದರೂ ನಕ್ಸಲರ ಕಾರ್ಯವ್ಯಾಪ್ತಿ ಕಿರಿದಾಗಿತ್ತು. ಆದರೆ, ಈಗ ಏನಾಗಿದೆ. ..

English summary
After the death of Veerappan Special Task Force had fear about emerging successor of forest brigand. Wikileaks US cable also talks about political response, IAS officer fear after brigand’s death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X