ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ಕಾಡಲ್ಲಿ ಏರಿದೆ,ಹಾರಿದೆ ಕೆಂಪು ಬಾವುಟ

By Mahesh
|
Google Oneindia Kannada News

Naxals ruling Veerappan forest territory
ಚಾಮರಾಜನಗರ, ಸೆ.19: ಆದರೆ, ಈಗ ಮತ್ತೆ ಕೆಂಪು ಬಾವುಟ ಎಲ್ಲೆಡೆ ಕಾಣ ತೊಡಗಿದೆ. ಬೆಂಗಳೂರು ಮೂಲದ ಸಿಪಿಐ(ಎಂ) ನಾಯಕ ರಮೇಶ್ ಸಾರಥ್ಯದಲ್ಲಿ 18,000 ಚ.ಅ ವ್ಯಾಪ್ತಿಯ ವೀರಪ್ಪನ್ ಅರಣ್ಯ ಸಾಮ್ರಾಜ್ಯದ ಮೇಲೆ ಮಾವೋವಾದಿಗಳು ಕಣ್ಣಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಮೂಲವಾಗಿಟ್ಟುಕೊಂಡು ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಮಾವೋವಾದಿಗಳು ರಾಜ್ಯಭಾರ ಮಾಡಲು ಮುಂದಾಗಿದ್ದಾರೆ.

ವನ್ನಿಯಾರ್ ಸಮುದಾಯಕ್ಕೆ ಸೇರಿದ್ದ ವೀರಪ್ಪನ್ ಅನ್ನು ಬಳಸಿಕೊಂಡು ವೋಟ್ ಬ್ಯಾಂಕ್ ರಾಜಕೀಯ ಆರಂಭಿಸಿದ ಪಿಎಂಕೆ ಕೂಡಾ ಈಗ ಕಾಲ್ಗಿತ್ತಿದೆ. ನಕ್ಸಲರು ಸಂಪೂರ್ಣವಾಗಿ ಜನರ ವಿಶ್ವಾಸ ಗಳಿಸುವತ್ತ ಹೆಜ್ಜೆ ಇರಿಸಿದ್ದಾರೆ.

Maoist South Western Regional Bureau (SWRB) ನ ಮುಖ್ಯಸ್ಥ ಚೆರ್ಕುರಿ ರಾಜಕುಮಾರ್ ಅಲಿಯಾಸ್ ಅಜಾದ್ ಅವರಿಂದ ಅಧಿಕಾರ ವಹಿಸಿಕೊಂಡು ಕಮ್ಯಾಂಡ್ ಆಗಿರುವ ಕುಪ್ಪುಸ್ವಾಮಿ ಅಲಿಯಾಸ್ ರಮೇಶ್ ಈಗ ತ್ವರಿತಗತಿಯಲ್ಲಿ ಎಲ್ಲೆಡೆ ಜಾಲವನ್ನು ವಿಸ್ತರಿಸುತ್ತಿದ್ದಾರೆ.

ಕರ್ನಾಟಕದ ಶೃಂಗೇರಿ, ಆಗುಂಬೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಸಿದ್ದ ನಕ್ಸಲ್ ನಾಯಕ ಬಿ.ಜಿ, ಕೃಷ್ಣಮೂರ್ತಿ ಈಗ ಅನಾರೋಗ್ಯ ಪೀಡಿತನಾಗಿದ್ದು, ಸಂಘಟನೆಯ ನೇತೃತ್ವ ವಹಿಸುತ್ತಿಲ್ಲ. ಆತನ ಪತ್ನಿ ಹೊಸಗದ್ದೆ ಪ್ರಭಾ ಕೂಡಾ ಅನಾರೋಗ್ಯ ಪೀಡಿತಳಾಗಿದ್ದು, ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ಇದೆ. ಪ್ರಭಾ ಸ್ಥಾನಕ್ಕೆ ಮುದಗರ್ ಲತಾ ಅವರನ್ನು ನೇಮಿಸಲಾಗಿದೆ.

ಒಟ್ಟಿನಲ್ಲಿ ಮಾವೋವಾದಿಗಳು ಕರ್ನಾಟಕದಲ್ಲಿ ಅರಣ್ಯದಲ್ಲಿ ಹೊಸ ನಾಯಕತ್ವದೊಂದಿಗೆ ಹೋರಾಡಲು ಸಜ್ಜಾಗಿದ್ದಾರೆ.

English summary
After the death of forest brigand Veerappan, Maoists become active in 18,000 sq km forest territory ruled by Veerappan belonging to Karnataka, Tamilnadu and Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X